ಭಾರತ, ಏಪ್ರಿಲ್ 2 -- ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಈ ಎರಡೂ ಧಾರಾವಾಹಿಗಳು ಟಿಆರ್ಪಿಯಲ್ಲಿ ಸದಾ ಅಗ್ರಸ್ಥಾನ ಪಡೆದಿವೆ. ಅಕ್ಕ-ತಂಗಿ ಬಾಂಧವ್ಯದ ಕಥೆಯು ಟಿಸಿಲೊಡೆದು ಎರಡು ಧಾರಾವಾಹಿಗಳಾಗಿದ್ದವು. ಅಕ್ಕಮ್ಮ ಭಾಗ್ಯಕ್ಕಳ ಸಂಸಾರದ ಕಥೆ ಭಾಗಲಕ್ಷ್ಮೀ ಆದ್ರೆ, ತಂಗಿ ಲಕ್ಷ್ಮೀ ಸಂಸಾರದ ಕಥೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಆಗಿತ್ತು.
ಈ ಎರಡೂ ಧಾರಾವಾಹಿಗಳು ಆರಂಭದಿಂದಲೂ ಜನ ಮನ ಗೆಲ್ಲುವಲ್ಲಿ ಸೋತಿರಲಿಲ್ಲ. ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಧಾರಾವಾಹಿಗಳು ಇವಾಗಿವೆ. ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಎರಡೂ ತನ್ನದೇ ಆದ ಅಭಿಮಾನ ಬಳಗವನ್ನು ಹೊಂದಿವೆ. ಟಿಆರ್ಪಿಯಲ್ಲೂ ಸದಾ ಅಗ್ರಸ್ಥಾನ ಕಾಯ್ದುಕೊಂಡಿದ್ದ ಈ ಧಾರಾವಾಹಿಗಳ ಕಥೆ ಇತ್ತೀಚೆಗೆ ಬೇಸರ ತರುವಂತಿದ್ದರೂ ಟಿಆರ್ಪಿ ಕುಸಿತ ಕಂಡಿರಲಿಲ್ಲ. ಇದೀಗ ತಂಗಿ ಲಕ್ಷ್ಮೀಯ ಕಥೆ ಮುಗಿಯುವ ಹಂತದಲ್ಲಿದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಅಂತಿಮ ಸಂಚಿಕೆಗಳು ಪ್ರಸಾರವಾಗುತ್ತಿವೆ. ಇದು ಧಾರಾವಾಹಿ ಪ್ರೇಕ್ಷಕರಿಗೆ ನೋವು ನೀ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.