ಭಾರತ, ಏಪ್ರಿಲ್ 2 -- ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಈ ಎರಡೂ ಧಾರಾವಾಹಿಗಳು ಟಿಆರ್‌ಪಿಯಲ್ಲಿ ಸದಾ ಅಗ್ರಸ್ಥಾನ ಪಡೆದಿವೆ. ಅಕ್ಕ-ತಂಗಿ ಬಾಂಧವ್ಯದ ಕಥೆಯು ಟಿಸಿಲೊಡೆದು ಎರಡು ಧಾರಾವಾಹಿಗಳಾಗಿದ್ದವು. ಅಕ್ಕಮ್ಮ ಭಾಗ್ಯಕ್ಕಳ ಸಂಸಾರದ ಕಥೆ ಭಾಗಲಕ್ಷ್ಮೀ ಆದ್ರೆ, ತಂಗಿ ಲಕ್ಷ್ಮೀ ಸಂಸಾರದ ಕಥೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಆಗಿತ್ತು.

ಈ ಎರಡೂ ಧಾರಾವಾಹಿಗಳು ಆರಂಭದಿಂದಲೂ ಜನ ಮನ ಗೆಲ್ಲುವಲ್ಲಿ ಸೋತಿರಲಿಲ್ಲ. ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಧಾರಾವಾಹಿಗಳು ಇವಾಗಿವೆ. ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಎರಡೂ ತನ್ನದೇ ಆದ ಅಭಿಮಾನ ಬಳಗವನ್ನು ಹೊಂದಿವೆ. ಟಿಆರ್‌ಪಿಯಲ್ಲೂ ಸದಾ ಅಗ್ರಸ್ಥಾನ ಕಾಯ್ದುಕೊಂಡಿದ್ದ ಈ ಧಾರಾವಾಹಿಗಳ ಕಥೆ ಇತ್ತೀಚೆಗೆ ಬೇಸರ ತರುವಂತಿದ್ದರೂ ಟಿಆರ್‌ಪಿ ಕುಸಿತ ಕಂಡಿರಲಿಲ್ಲ. ಇದೀಗ ತಂಗಿ ಲಕ್ಷ್ಮೀಯ ಕಥೆ ಮುಗಿಯುವ ಹಂತದಲ್ಲಿದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಅಂತಿಮ ಸಂಚಿಕೆಗಳು ಪ್ರಸಾರವಾಗುತ್ತಿವೆ. ಇದು ಧಾರಾವಾಹಿ ಪ್ರೇಕ್ಷಕರಿಗೆ ನೋವು ನೀ...