ಭಾರತ, ಮೇ 5 -- ಕಲಬುರಗಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಯಮಗಳ ಹೆಸರಿನಲ್ಲಿ ಕೆಲವೇ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ, ಮಾಂಗ್ಯಲ ಮುಂತಾದವುಗಳನ್ನು ತೆಗೆಸುವುದನ್ನು ಕೆಲವರು ಮುಂದುವರಿಸಿದ್ದು, ವ್ಯಾಪಕ ಆಕ್ರೋಶ ಅಸಮಾಧಾನಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಪ್ರಸಕ್ತ ಸಾಲಿನ ವೈದ್ಯಕೀಯ ಪ್ರವೇಶಕ್ಕೆ ಭಾನುವಾರ (ಮೇ 4) ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್-ಯುಜಿ) ವೇಳೆ ಕಲಬುರಗಿ ನಗರದ ಸೇಂಟ್ ಮೇರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿ ಪರೀಕ್ಷೆ ಬರೆಯಲು ಹೇಳಿದ್ದು ಈಗ ದೇಶದ ಗಮನಸೆಳೆದಿದೆ.
ಈ ಹಿಂದೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಿಇಟಿ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗೆ ಒಂದು ಪರೀಕ್ಷೆಗೆ ಮಾತ್ರವೇ ಜನಿವಾರ ತೆಗೆದು ಬರೆಯಲು ಹೇಳಿದ್ದು ವಿವಾದಕ್ಕೀಡಾಗಿತ್ತು. ಇದಲ್ಲದೆ, ರೈಲ್ವೆ ಮಂಡಳಿಯ ಪರೀಕ್ಷೆ ಯಲ್ಲಿ ಜನಿವಾರ ಧರಿಸಿ ಬರುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದ ಬೆನ್ನಲ್ಲೆ ಈ ಘಟನೆ ನಡೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.