Bengaluru, ಮಾರ್ಚ್ 9 -- Bengaluru Weather Today: ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಶುಕ್ರವಾರ ಹಾಗೂ ಶನಿವಾರ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್ ಸನಿಹವೇ ಇತ್ತು. ಇದು ಇಂದು (ಮಾರ್ಚ್ 9) ಮುಂದುವರಿಯಲಿದೆ. ಆದ್ದರಿಂದ, ಸುಡು ಬಿಸಿಲು ಬೆಂಗಳೂರಿಗನ್ನು ಕಾಡಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. ಇನ್ನುಳಿದಂತೆ, ನಾಡಿದ್ದು ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮಳೆಯಾಗಬಹುದು ಎಂಬ ಸುಳಿವು ನೀಡಿರುವುದು ಸ್ವಲ್ಪ ಸಮಾಧಾನಕರ ವಿಚಾರ. ಕರ್ನಾಟಕದ ಉಳಿದ ಕಡೆ ಇಂದು ಕೂಡ ಒಣಹವೆ ಮುಂದುವರಿದಿದ್ದು, ಕರ್ನಾಟಕದ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸುಡು ಬಿಸಲು ಅನುಭವಕ್ಕೆ ಬರಲಿದೆ. ಕರ್ನಾಟಕದ ದಕ್ಷಿಣ ಒಳನಾಡಿನವರಿಗೆ ನಾಡಿದ್ದು ಮಳೆ ಸಿಂಚನ ಸಮಾಧಾನ ಕೊಡಬಹುದು.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಬೆಂಗಳೂರು ನಗರದ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1.9 ಡಿಗ್ರಿ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.