ಭಾರತ, ಫೆಬ್ರವರಿ 28 -- Karnataka Weather Feb 28: ಕರಾವಳಿ ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕರಾವಳಿ ಭಾಗದಲ್ಲಿ ಇಂದು (ಫೆ 28) ಕೂಡ ಶಾಖದ ಅಲೆಗಳು ಇರಲಿವೆ. ಈ ಅವಧಿಯಲ್ಲಿ ಬಿಸಿ ಗಾಳಿ ಹಾಗೂ ಆರ್ದ್ರ ಪರಿಸ್ಥಿತಿ ಹೆಚ್ಚಾಗಿರಲಿದೆ. ಹೀಗಾಗಿ ಪೂರ್ವಾಹ್ನ 11ರ ನಂತರ ಅಪರಾಹ್ನ 3 ಗಂಟೆ ತನಕ ಬಿಸಿಲಿಗೆ ಹೋಗದಂತೆ ಭಾರತೀಯ ಹವಾಮಾನ ಇಲಾಖೆ ತಜ್ಞರು ಎಚ್ಚರಿಸಿದ್ದಾರೆ. ಉಳಿದಂತೆ ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದೆ.
ಬಂಗಾಳ ಕೊಲ್ಲಿಯಲ್ಲಿ ಅಲ್ಪ ಪ್ರಮಾಣದ ವಾಯುಭಾರ ಕುಸಿತವಾಗಿದ್ದು, ಇದು ಅರಬ್ಬಿ ಸಮುದ್ರದ ಕಡೆ ಸಾಗುತ್ತಿದೆ. ಇದರಿಂದಲೇ ದಕ್ಷಿಣ ಭಾರತದ ಭಾಗದಲ್ಲಿ ತಾಪಮಾನ ಹೆಚ್ಚಳವಾಗಲು ಕಾರಣವಾಗಿದೆ. ಇದರ ಪರಿಣಾಮ, ಕರಾವಳಿ ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಇಂದು ಕೂಡ ಶಾಖದ ಅಲೆಗಳ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಜಿಲ್ಲೆಗಳಲ್ಲಿ ಕೆಲವು ಕಡೆ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ಮೀರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.