Bengaluru, ಏಪ್ರಿಲ್ 16 -- ಕರ್ನಾಟಕ ಶಾಲಾ ಪ್ರವೇಶ ನಿಯಮ: ಕರ್ನಾಟಕದಲ್ಲಿ ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಈಗಾಗಲೇ ಇರುವ ವಯೋಮಿತಿ ನಿಯಮವನ್ನು ಕರ್ನಾಟಕ ಶಿಕ್ಷಣ ಇಲಾಖೆ ಈ ವರ್ಷದ ಮಟ್ಟಿಗೆ ತುಸು ಸಡಿಲಗೊಳಿಸಿದೆ. ಇದು ಷರತ್ತುಬದ್ಧ ಸಡಿಲಿಕೆಯಾಗಿದ್ದು, ಮಗುವಿಗೆ ಆರು ವರ್ಷ ಆಗಿರಬೇಕು ಎಂಬ ನಿಯಮ ಕಡ್ಡಾಯ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಆದಾಗ್ಯೂ, ಎಸ್ಇಪಿ ವರದಿ ಆಧಾರದ ಮೇಲೆ ಮಗು ಎಲ್ಕೆಜಿ, ಯುಕೆಜಿ ಕಲಿಕೆ ಮಾಡಿದ್ದು, ಮಗುವಿಗೆ 5 ವರ್ಷ 5 ತಿಂಗಳಾಗಿದ್ದರೆ ಈ ಬಾರಿ ಒಂದನೇ ಕ್ಲಾಸ್ಗೆ ಪ್ರವೇಶ ಪಡೆಯಬಹುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು. ಹಾಗಿದ್ದರೆ ಮಾತ್ರವೇ 1ನೇ ತರಗತಿಗೆ ಪ್ರವೇಶಾವಕಾಶ ಸಿಗಲಿದೆ. ಈ ಬಾರಿ, ಎಲ್ಕೆಜಿ, ಯುಕೆಜಿ ಆಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡಬಹುದು. ಆದರೆ, ಮಕ್ಕಳಿಗೆ 5 ವರ್ಷ 5 ತಿಂಗಳಾಗಿರಬೇಕು. ಪೋಷಕರ ಒತ್ತಾಯದ ಮೇರೆಗೆ ಇದೊಂದು ವರ್ಷ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.