Bengaluru, ಏಪ್ರಿಲ್ 16 -- ಕರ್ನಾಟಕ ಶಾಲಾ ಪ್ರವೇಶ ನಿಯಮ: ಕರ್ನಾಟಕದಲ್ಲಿ ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಈಗಾಗಲೇ ಇರುವ ವಯೋಮಿತಿ ನಿಯಮವನ್ನು ಕರ್ನಾಟಕ ಶಿಕ್ಷಣ ಇಲಾಖೆ ಈ ವರ್ಷದ ಮಟ್ಟಿಗೆ ತುಸು ಸಡಿಲಗೊಳಿಸಿದೆ. ಇದು ಷರತ್ತುಬದ್ಧ ಸಡಿಲಿಕೆಯಾಗಿದ್ದು, ಮಗುವಿಗೆ ಆರು ವರ್ಷ ಆಗಿರಬೇಕು ಎಂಬ ನಿಯಮ ಕಡ್ಡಾಯ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಆದಾಗ್ಯೂ, ಎಸ್‌ಇಪಿ ವರದಿ ಆಧಾರದ ಮೇಲೆ ಮಗು ಎಲ್‌ಕೆಜಿ, ಯುಕೆಜಿ ಕಲಿಕೆ ಮಾಡಿದ್ದು, ಮಗುವಿಗೆ 5 ವರ್ಷ 5 ತಿಂಗಳಾಗಿದ್ದರೆ ಈ ಬಾರಿ ಒಂದನೇ ಕ್ಲಾಸ್‌ಗೆ ಪ್ರವೇಶ ಪಡೆಯಬಹುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು. ಹಾಗಿದ್ದರೆ ಮಾತ್ರವೇ 1ನೇ ತರಗತಿಗೆ ಪ್ರವೇಶಾವಕಾಶ ಸಿಗಲಿದೆ. ಈ ಬಾರಿ, ಎಲ್​ಕೆಜಿ, ಯುಕೆಜಿ ಆಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡಬಹುದು. ಆದರೆ, ಮಕ್ಕಳಿಗೆ 5 ವರ್ಷ 5 ತಿಂಗಳಾಗಿರಬೇಕು. ಪೋಷಕರ ಒತ್ತಾಯದ ಮೇರೆಗೆ ಇದೊಂದು ವರ್ಷ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು...