ಭಾರತ, ಏಪ್ರಿಲ್ 17 -- ಕರ್ನಾಟಕ ಜಾತಿ ಗಣತಿ ವರದಿ: ಬಹುಚರ್ಚಿತ ಹಾಗೂ ವಿವಾದಕ್ಕೀಡಾಗಿರುವ ಕರ್ನಾಟಕ ಜಾತಿ ಗಣತಿ ವರದಿ ಕುರಿತಾದ ವಿಶೇಷ ಸಚಿವ ಸಂಪುಟ ಸಭೆ ಇಂದು (ಏಪ್ರಿಲ್ 17) ಸಂಜೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 6 ಪುಟಗಳ ಟಿಪ್ಪಣಿ ಮಂಡನೆಯಾಗಿದ್ದು, ಜನಸಂಖ್ಯೆ ಆಧರಿಸಿದ ಮೀಸಲಾತಿ ವಿಚಾರ ಪ್ರಸ್ತಾಪವಾಗಿದೆ. ವರದಿ ಪೂರ್ತಿಯಾಗಿ ಓದಿ, ಅಧ್ಯಯನ ನಡೆಸಿದ ಬಳಿಕ ಚರ್ಚಿಸುವ ಬಗ್ಗೆ ಬಹುತೇಕ ಸಚಿವರು ಒಲವು ತೋರಿದ ಕಾರಣ ಈ ಸಚಿವ ಸಂಪುಟ ಸಭೆಯಲ್ಲಿ ವರದಿ ಕುರಿತಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

(ಮಾಹಿತಿ ಅಪ್ಡೇಟ್ ಆಗುತ್ತಿದೆ)

Published by HT Digital Content Services with permission from HT Kannada....