ಭಾರತ, ಏಪ್ರಿಲ್ 13 -- 2022ರ ನಂತರ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯವನ್ನಾಡಿದ ಕನ್ನಡಿಗ ಕರುಣ್ ನಾಯರ್ ತನಗೆ ಅವಕಾಶ ಸಿಕ್ಕ ಮೊದಲ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬಿರಿದರು. ಆದರೆ ಅವರ ಆರ್ಭಟದ ಹೊರತಾಗಿಯೂ ಗೆಲುವು ಕರುಣೆ ತೋರಲಿಲ್ಲ. ಪ್ರಸಕ್ತ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಮೊದಲ ಸೋಲಿನ ರುಚಿ ಕಂಡಿದೆ. ದೇಶೀಯ ಕ್ರಿಕೆಟ್​​ನ ಕಳೆದ ಸೀಸನ್​​ ಎಲ್ಲಾ ಸ್ವರೂಪದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರುಣ್​ ಭರ್ಜರಿ ಅರ್ಧಶತಕದ (89) ಸಹಾಯದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಸನಿಹಕ್ಕೆ ಬಂದು 12 ರನ್ನಿಂದ ಪರಾಭವಗೊಂಡಿದೆ. 19ನೇ ಓವರ್​ನಲ್ಲಿ ನಡೆದ ಹೈಡ್ರಾಮಾದಲ್ಲಿ ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈ ರೋಚಕ ಗೆಲುವಿಗೆ ಸಾಕ್ಷಿಯಾಯಿತು.

19ನೇ ಓವರ್​​ನ 4, 5, 6ನೇ ಎಸೆತಗಳಲ್ಲಿ ಕ್ರಮವಾಗಿ ಅಶುತೋಷ್ ಶರ್ಮಾ, ಕುಲ್ದೀಪ್ ಯಾದವ್, ಮೋಹಿತ್​ ಶರ್ಮಾ ರನೌಟ್ ಆದರು. ಗೆಲ್ಲಲು 15 ರನ್ ಬೇಕಿದ್ದಾಗ ಈ ಮೂರು ರನೌಟ್​ಗಳು ಆಗಿದ್ದು, ಪಂದ್ಯದ ಚಿತ್ರಣವನ್ನೇ ಬದಲಿಸಿತು. ಇದಕ್ಕೂ ಮುನ್ನ ಕರುಣ್ ಶರ್ಮಾ ಪ್ರಮುಖ ವ...