Bangalore, ಮೇ 21 -- ಲಂಡನ್: ಕನ್ನಡದ ಹಿರಿಯ ಲೇಖಕಿ, ಹೋರಾಟಗಾರ್ತಿ ಬಾನು ಮುಷ್ತಾಕ್ ಅವರ ಅನುವಾದಿತ ಕೃತಿಯು ಸಾಹಿತ್ಯ ವಲಯದ ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿ ಎನ್ನಿಸಿರುವ 2025ನೇ ಸಾಲಿನ ಬೂಕರ್ ಪ್ರಶಸ್ತಿಗೆ ಅಯ್ಕೆಯಾಗಿದೆ. ಬಾನು ಮುಷ್ತಾಕ್ ಅವರ ಅನುವಾದಿತ ಹಾರ್ಟ್ ಲ್ಯಾಂಪ್ ಎನ್ನುವ ಸಣ್ಣ ಕತೆಗಳ ಅನುವಾದಿತ ಕೃತಿಗೆ ಈ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಬೂಕರ್ ಪ್ರಶಸ್ತಿಯೊಂದಿಗೆ 50 ಸಾವಿರ ಪೌಂಡ್ ಅಂದರೆ ಸುಮಾರು 57.28 ಲಕ್ಷ ರೂ.ನಗದು ಬಹುಮಾನವೂ ಬಾನು ಅವರಿಗೆ ಲಭಿಸಿದೆ. ಬಾನು ಮುಷ್ತಾಕ್ ಅವರು ಮೂರೂವರೆ ದಶಕಗಳ ಕಾಲ ಬರೆದಿರುವ ಸಣ್ಣ ಕಥೆಗಳನ್ನು ಆಧರಿಸಿ ಲೇಖಕಿ ದೀಪಾ ಬಸ್ತಿ ಅವರು ಇಂಗ್ಲೀಷ್ಗೆ ಹಾರ್ಟ್ ಲ್ಯಾಂಪ್ ಎನ್ನುವ ಹೆಸರಿನಲ್ಲಿ ಅನುವಾದಿಸಿದ್ದಾರೆ.
ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ 2025 ರ ಆಯ್ಕೆ ಸಮಿತಿ ಅಧ್ಯಕ್ಷರೂ ಹೆಚ್ಚು ಮಾರಾಟವಾದ ಬೂಕರ್ ಪ್ರಶಸ್ತಿ-ದೀರ್ಘಪಟ್ಟಿ ಮಾಡರ್ನ್ ಲೇಖಕ ಮ್ಯಾಕ್ಸ್ ಪೋರ್ಟರ್ ಅವರು ಮಂಗಳವಾರ, 2025 ರ ಮೇ 20 ರಂದು, ಅಂದರೆ ಭಾರತೀಯ ಕಾಲಮಾನ ಮಧ್ಯರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.