Bangalore, ಮೇ 5 -- ಕನ್ನಡ ಧಾರಾವಾಹಿಗಳಲ್ಲಿ ಕಾಡುವಂತಹ ಹಾಡು ಅಥವಾ ಹಾಡುಗಳು ಇರುತ್ತವೆ. ಅಂತಹ ಹಾಡುಗಳು ಸೀರಿಯಲ್ನ ಕುರಿತು ವೀಕ್ಷಕರಿಗೆ ಒಂದು ನವಿರಾದ ಭಾವ ಮೂಡಿಸುತ್ತವೆ. ಅಮೃತಧಾರೆ ಧಾರಾವಾಹಿಯ "ನಾ ಭುವಿಯಂತೆ ಕಾದೆ, ನೀ ಜಿನುಗೋ ಹನಿಯಾದೆ... ಒಲವ ಅಮೃತಧಾರೆ, ನನ್ನೊಲವ ಅಮೃತಧಾರೆ " ಇರಬಹುದು. ಶಾರದೆ ಧಾರಾವಾಹಿಯ ಶೀರ್ಷಿಕೆ ಗೀತೆ "ಸಹನೆಗೂ ಸಹನೆ ಕಲಿಸೋ ಜಗದ ಒಡಲು ಇವಳು" ಇರಬಹುದು. ಸೀತಾರಾಮ ಧಾರಾವಾಹಿಯ ಯಾರ ಜೀವ ಯಾರನ್ನೋ ಸೇರೋದು, ಬಾಳ ತೀರ್ಮಾನ.. ಅದನು ಮೀರಿ ಸಾಗದು ಈ ಜೀವನ ಇರಬಹುದು.
ಈಟಿವಿಯ ಮೂಡಲ ಮನೆ ಸೀರಿಯಲ್ನ ರೆಂಬೆ ಕೊಂಬೆಯ ಮ್ಯಾಲ ಗೂಡು ಕಟ್ಟಿದ್ದಾವ ರೆಕ್ಕಿ ಬಲಿತ ಹಕ್ಕಿ..., ಪ್ರೀತಿ ಇಲ್ಲದ ಮೇಲೆ ಸೀರಿಯಲ್ನ "ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ, ಮೋಡ ಕಟ್ಟಿತು ಹೇಗೆ" ಎಂಬ ಹಾಡುಗಳೂ ನಿಮಗೆ ನೆನಪಿರಬಹುದು. ಮುಕ್ತ ಧಾರಾವಾಹಿಯ "ಮುಕ್ತ... ಮುಕ್ತ... ಮುಕ್ತ..." ಎಂಬ ಸಿ. ಅಶ್ವತ್ ಧ್ವನಿ ಈಗಲೂ ಹೃದಯದಲ್ಲಿ ಮೊಳಗುತ್ತಿರಬಹುದು. ಪುಟ್ಟ ಗೌರಿ ಸೀರಿಯಲ್ನ ಹಾಡಂತೂ ಅಕ್ಕ ಪಕ್ಕದ ಮನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.