Srinagara, ಮೇ 11 -- ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ವಾರದಿಂದ ಉಗ್ರರ ಉಪಟಳ, ಗುಂಡಿನ ದಾಳಿ ಸದ್ದು ಜೋರಾಗಿರುವ ನಡುವೆಯೇ ಶನಿವಾರದಂದು ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆಯ ಅಧಿಕಾರಿ ರಾಜ್ ಕುಮಾರ್ ಥಾಪಾ ಪ್ರಾಣ ಕಳೆದುಕೊಂಡಿದ್ದಾರೆ. ಕಾಶ್ಮೀರದ ರಾಜೌರಿ ಜಿಲ್ಲೆಯ ಹೆಚ್ಚುವರಿ ಆಯುಕ್ತರಾಗಿದ್ದ ಥಾಪಾ ಅವರ ಅಧಿಕೃತ ಸರ್ಕಾರಿ ನಿವಾಸದ ಮೇಲೆ ಫಿರಂಗಿ ಶೆಲ್ ದಾಳಿ ನಡೆದು ಮೃತಪಟ್ಟರು. ಪಾಕಿಸ್ತಾನವು ಕಾಶ್ಮೀರದ ರಾಜೌರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಅಧಿಕಾರಿಗಳು ಸೇರಿದಂತೆ ಕೆಲವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ.ಇಂತಹ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಹಿರಿಯ ಅಧಿಕಾರಿ ನಿವಾಸದ ಮೇಲಿನ ದಾಳಿಯೂ ಸೇರಿದೆ.
ಶನಿವಾರ ಬೆಳಗಿನಜಾವ ನಡೆದ ದಾಳಿ ವೇಳೆ ಥಾಪಾ ಅವರು ಮೃತಪಟ್ಟಿದ್ದಾರೆ. ಪಾಕ್ ಶೆಲ್ ದಾಳಿಯ ನಂತರ ರಾಜ್ ಕುಮಾರ್ ಥಾಪಾ ಅವರ ಮನೆಯನ್ನು ಹೊಡೆದುರುಳಿಸಿದಾಗ ಅವರು ಪ್ರಾಣ ಕಳೆದುಕೊಂಡಿದ್ದಾರೆ.ಅವರು ವೈದ್ಯರಾಗಿರುವ ಪತ್ನಿ, ಮತ್ತು ಇಬ್ಬರು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.