ಭಾರತ, ಫೆಬ್ರವರಿ 23 -- ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ತೋರಿದೆ. ಬೌಲಿಂಗ್ ಮತ್ತು ಫೀಲ್ಡಿಂಗ್​ನಲ್ಲಿ ಚಾಣಾಕ್ಷತೆ ಪ್ರದರ್ಶಿಸಿದೆ. ಅದಕ್ಕೆ ಸಾಕ್ಷಿ ಪಾಕಿಸ್ತಾನ ತಂಡದ ಕುಸಿತ ಹಾಗೂ ಅಕ್ಷರ್ ಪಟೇಲ್ ಮಾಡಿದ ರನೌಟ್. ಅಕ್ಷರ್​ ಕಣ್ಣು ಮಿಟುಕಿಸುವುದರಲ್ಲಿ ರನೌಟ್ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಔಟ್ ನೋಡಿ ದಂಗಾಗಿರುವ ಪಾಕಿಸ್ತಾನದ ಅಭಿಮಾನಿಗಳ ವಿಡಿಯೋ ಸಹ ಇಂಟರ್​ನೆಟ್​ನಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಪಂದ್ಯದ 10ನೇ ಓವರ್​​ನ 2ನೇ ಎಸೆತದಲ್ಲಿ ಫಖಾರ್ ಜಮಾನ್ ಅವರ ಬದಲಿಗೆ ಸ್ಥಾನ ಪಡೆದಿರುವ ಇಮಾಮ್-ಉಲ್-ಹಲ್ ಮಿಡ್-ಆನ್‌ಗೆ ಚೆಂಡು ಬಾರಿಸಿ ಸಿಂಗಲ್ ರನ್ ಕದಿಯಲು ಯತ್ನಿಸಿದರು. ಆದರೆ ಅಲ್ಲೇ ಇದ್ದ ಅಕ್ಷರ್​ ಪಟೇಲ್​ ಕೈ ಸೇರಿತು ಚೆಂಡು. ಆದರೂ ರನ್​ಗೆ ಯತ್ನಿಸಿದ ಇಮಾಮ್​ರನ್ನು ಅಕ್ಷರ್​ ರನೌಟ್ ಮಾಡಿ ಹೊರದಬ್ಬಿದರು. ಕುಲ್ದೀಪ್ ಯಾದವ್ ಬೌಲಿಂಗ್ ಮಾಡುತ್ತಿದ್ದರು. ವೇಗವಾಗಿ ಓಡಿದ ಇಮಾಮ್ ಸರಿಯಾದ ...