Bengaluru, ಮೇ 1 -- ಜೀ 5 ಒಟಿಟಿಯಲ್ಲಿ ಕನ್ನಡದ ಮಿನಿ ವೆಬ್ಸಿರೀಸ್ ಅಯ್ಯನ ಮನೆ ಸಖತ್ ಸೌಂಡ್ ಮಾಡುತ್ತಿದೆ. ಇತ್ತೀಚೆಗಷ್ಟೇ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿರುವ ಈ ಸೀರಿಸ್, ಕಡಿಮೆ ಅವಧಿಯಲ್ಲಿ ಭರ್ಜರಿ ವೀಕ್ಷಣೆ ಕಂಡು, ಮತ್ತಷ್ಟು ಪ್ರಯೋಗಗಳಿಗೆ ಮುನ್ನುಡಿ ಬರೆದಿದೆ. ಭಾಷೆಯ ಅಡೆತಡೆಗಳನ್ನು ಮೀರಿ ದಾಖಲೆಯ ವೀಕ್ಷಣೆ ಕಂಡಿದೆ. ಏಪ್ರಿಲ್ 25ರಂದು ʻಅಯ್ಯನ ಮನೆʼ ವೆಬ್ ಸರಣಿ ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೆ 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ ಕಾಣುವ ಮೂಲಕ ಹೊಸ ದಾಖಲೆ ಬರೆದಿದೆ. ಪ್ರಾದೇಶಿಕ ಭಾಷೆಯ ವೆಬ್ ಸರಣಿ ಈ ಮಟ್ಟದ ವೀಕ್ಷಣೆ ಕಂಡಿರುವುದು ಇಡೀ ತಂಡಕ್ಕೂ ಖುಷಿ ಕೊಟ್ಟಿದೆ. ಈ ಗೆಲುವಿನ ಬಗ್ಗೆ ಇಡೀ ತಂಡ ಖುಷಿಯ ಮಾತುಗಳನ್ನಾಡಿದೆ.
ಜಾಜಿ ಪಾತ್ರದಲ್ಲಿ ಅಮೋಘವಾಗಿ ನಟಿಸಿರುವ ನಟಿ ಖುಷಿ ರವಿ, "ಅಯ್ಯನ ಮನೆ ಭಾಗವಾಗಿರುವುದು ನಿಜಕ್ಕೂ ಅವಿಸ್ಮರಣೀಯ ಅನುಭವ. ನನ್ನ ಪಾತ್ರವನ್ನು ಚಿತ್ರಿಸುವುದು ಸವಾಲಿನದ್ದಾಗಿದ್ದರೂ ಅದು ಈಗ ಪ್ರತಿಫಲದಾಯಕವಾಗಿ ಕಾಣುತ್ತಿದೆ. ಇಷ್ಟ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.