Bengaluru, ಮೇ 17 -- ಭುವನೇಶ್ವರ: ಒಡಿಶಾದ ವಿವಿಧೆಡೆ ಸಂಭವಿಸಿದ ಭೀಕರ ಸಿಡಿಲು ಬಡಿತ ದುರಂತ ಪ್ರಕರಣದಲ್ಲಿ ಶುಕ್ರವಾರ ಒಂದೇ ದಿನ 15 ಮಂದಿ ಮೃತಪಟ್ಟಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಾರ, ಕೊರಪುಟ್ ಜಿಲ್ಲೆಯಿಂದ ಅತಿ ಹೆಚ್ಚು ಸಾವು ಸಂಭವಿಸಿದ್ದು, ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗಂಜಾಂ ಜಿಲ್ಲೆಯಲ್ಲಿ ಮೂರು ಸಾವುಗಳು ವರದಿಯಾಗಿದ್ದರೆ, ನಬರಂಗ್ಪುರ, ಜಜ್ಪುರ್ ಮತ್ತು ಧೆಂಕನಲ್ನಲ್ಲಿ ತಲಾ ಎರಡು ಸಾವುಗಳು ದಾಖಲಾಗಿವೆ. ರಾಯಗಡ, ಕಟಕ್ ಮತ್ತು ಮಯೂರ್ಭಂಜ್ ಜಿಲ್ಲೆಗಳಲ್ಲಿ ತಲಾ ಒಂದು ಸಾವು ವರದಿಯಾಗಿದೆ.
ಸಿಡಿಲು ಬಡಿದು 15 ಜನರು ಮೃತಪಟ್ಟ ಘಟನೆಗೆ ಒಡಿಶಾ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಸಂತಾಪ ಸೂಚಿಸಿದ್ದಾರೆ. ಇದು ನೈಸರ್ಗಿಕ ವಿಪತ್ತು, ಮತ್ತು ದುರದೃಷ್ಟವಶಾತ್ ಅಂತಹ ಘಟನೆಗಳು ಪ್ರಾಣಹಾನಿಗೆ ಕಾರಣವಾಗುತ್ತವೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ಇಲಾಖೆ ನೀಡಲಿದೆ. ನಾವು ಪ್ರತಿ ಪ್ರಕರಣವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.