ಭಾರತ, ಮೇ 17 -- ಹೇಗಿದೆ ಮನದ ಕಡಲ ಸಿನಿಮಾ?: ಯುವ ಮನಸ್ಸುಗಳನ್ನು ಅರ್ಥ ಮಾಡಿಕೊಂಡು, ಅವರನ್ನೇ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಚಿತ್ರ ಮಾಡುವವರ ಪೈಕಿ ಯೋಗರಾಜ್ ಭಟ್ ಪ್ರಮುಖರು. ಅವರ ಹೊಸ ಚಿತ್ರ 'ಮನದ ಕಡಲು' ಸಹ ಅಂತಹ ಪ್ರಯತ್ನಗಳಲ್ಲೊಂದು. ಮನದ ಕಡಲು ಈಗ ಸೋನಿ ಲಿವ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಒಟಿಟಿಪ್ಲೇನಲ್ಲೂ ಈ ಸಿನಿಮಾ ನೋಡಬಹುದು.
ಮನದ ಕಡಲು ಲವ್ ಡ್ರಾಮಾ ಜಾನರ್ನ ಸಿನಿಮಾ. ಇ. ಕೃಷ್ಣಪ್ಪ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿರುವ ಈ ಸಿನಿಮಾ 154 ನಿಮಿಷಗಳ ಅವಧಿಯದ್ದು.
ಮನದ ಕಡಲು ಕಥೆ ಏನು?: ಸುಮುಖ ಒಬ್ಬ ಮೆಡಿಕಲ್ ವಿದ್ಯಾರ್ಥಿ. ಒಂದು ದುರ್ಘಟನೆಯ ನಂತರ ವೈದ್ಯಕೀಯ ವೃತ್ತಿ ಬಗ್ಗೆ ತಿರಸ್ಕಾರ ಬಂದು ಓದುವುದನ್ನೇ ನಿಲ್ಲಿಸುತ್ತಾನೆ. ಹೀಗಿರುವಾಗಲೇ ರಾಶಿಕಾ ಎಂಬ ಕ್ರಿಕೆಟ್ ಆಟಗಾರ್ತಿಯ ಮೇಲೆ ಮೊದಲ ನೋಟದಲ್ಲೇ ಅವನಿಗೆ ಪ್ರೀತಿಯಾಗುತ್ತದೆ. ಆರು ತಿಂಗಳ ನಂತರ ನೋಡೋಣ ಎಂದು ಹೇಳಿಕಳುಹಿಸುವ ಅವಳು, ಆರು ತಿಂಗಳು ಮುಗಿಯುವುದರೊಳಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.