ಭಾರತ, ಏಪ್ರಿಲ್ 2 -- Court OTT Release: ಪ್ರಿಯದರ್ಶಿ, ಹರ್ಷ್ ರೋಹನ್ ಮತ್ತು ಶ್ರೀದೇವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತೆಲುಗಿನ 'ಕೋರ್ಟ್: ಸ್ಟೇಟ್ ವರ್ಸಸ್ ಎ ನೋಬಡಿ' ಚಿತ್ರವು ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿದೆ. ಕಾನೂನು ಹಾಗೂ ನ್ಯಾಯಲಯಕ್ಕೆ ಸಂಬಂಧಿಸಿದ ಈ ಚಿತ್ರವು ಮಾರ್ಚ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನ್ಯಾಚುರಲ್ ಸ್ಟಾರ್ ನಾನಿ ಪ್ರಸ್ತುತ ಪಡಿಸಿದ ಈ ಚಿತ್ರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆರಂಭದಿಂದಲೂ ಭಾರಿ ಕಲೆಕ್ಷನ್ ಮಾಡುತ್ತಿದೆ ಈ ಸಿನಿಮಾ. ಕೋರ್ಟ್ ಸಿನಿಮಾ ಈಗ ಒಟಿಟಿ ವೇದಿಕೆಗೆ ಬರಲು ಸಜ್ಜಾಗಿದೆ.
ನೆಟ್ಫ್ಲಿಕ್ಸ್ನ ಒಟಿಟಿ ಪ್ಲಾಟ್ಫಾರ್ಮ್ ಕೋರ್ಟ್ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಏಪ್ರಿಲ್ ಎರಡನೇ ವಾರದಲ್ಲಿ ಚಿತ್ರವನ್ನು ಸ್ಟ್ರೀಮಿಂಗ್ಗೆ ತರಲು ನೆಟ್ಫ್ಲಿಕ್ಸ್ ಯೋಜಿಸಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವು ಏಪ್ರಿಲ್ 11 ರಂದು ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ಆದಾಗ್ಯೂ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.