ಭಾರತ, ಏಪ್ರಿಲ್ 2 -- Court OTT Release: ಪ್ರಿಯದರ್ಶಿ, ಹರ್ಷ್ ರೋಹನ್ ಮತ್ತು ಶ್ರೀದೇವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತೆಲುಗಿನ 'ಕೋರ್ಟ್: ಸ್ಟೇಟ್ ವರ್ಸಸ್ ಎ ನೋಬಡಿ' ಚಿತ್ರವು ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿದೆ. ಕಾನೂನು ಹಾಗೂ ನ್ಯಾಯಲಯಕ್ಕೆ ಸಂಬಂಧಿಸಿದ ಈ ಚಿತ್ರವು ಮಾರ್ಚ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನ್ಯಾಚುರಲ್ ಸ್ಟಾರ್ ನಾನಿ ಪ್ರಸ್ತುತ ಪಡಿಸಿದ ಈ ಚಿತ್ರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆರಂಭದಿಂದಲೂ ಭಾರಿ ಕಲೆಕ್ಷನ್ ಮಾಡುತ್ತಿದೆ ಈ ಸಿನಿಮಾ. ಕೋರ್ಟ್ ಸಿನಿಮಾ ಈಗ ಒಟಿಟಿ ವೇದಿಕೆಗೆ ಬರಲು ಸಜ್ಜಾಗಿದೆ.

ನೆಟ್‌ಫ್ಲಿಕ್ಸ್‌ನ ಒಟಿಟಿ ಪ್ಲಾಟ್‌ಫಾರ್ಮ್ ಕೋರ್ಟ್ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಏಪ್ರಿಲ್ ಎರಡನೇ ವಾರದಲ್ಲಿ ಚಿತ್ರವನ್ನು ಸ್ಟ್ರೀಮಿಂಗ್‌ಗೆ ತರಲು ನೆಟ್‌ಫ್ಲಿಕ್ಸ್‌ ಯೋಜಿಸಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವು ಏಪ್ರಿಲ್ 11 ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ಆದಾಗ್ಯೂ ...