Bengaluru, ಮೇ 6 -- ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ಬೇಡಿಕೆ ಹೆಚ್ಚು. ವಾರ ವಾರ ಹೊಸ ಹೊಸ ಚಿತ್ರಗಳು ಸ್ಟ್ರೀಮಿಂಗ್ ಆಗುತ್ತಲೇ ಇರುತ್ತವೆ. ಅಂಥ ಸಿನಿಮಾಗಳು ಕನ್ನಡ ಸಹಿತ ದಕ್ಷಿಣದ ಇನ್ನುಳಿದ ಭಾಷೆಗಳಿಗೂ ಡಬ್ ಆಗಿ, ಹೆಚ್ಚೆಚ್ಚು ವೀಕ್ಷಣೆ ಕಾಣುತ್ತವೆ. ಇದೀಗ ಕಳೆದ ತಿಂಗಳಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಹಿಟ್ ಪಟ್ಟ ಪಡೆದ ʻಮರಣಮಾಸ್ʼ ಮತ್ತು ʻತುಡರುಮ್ʼ ಸಿನಿಮಾಗಳೀಗ ಒಟಿಟಿಗೆ ಆಗಮಿಸಲಿವೆ.
ಮಲಯಾಳಂ ನಟ ಬಾಸಿಲ್ ಜೋಸೆಫ್ ಕನ್ನಡ ಸಿನಿಮಾಪ್ರಿಯರಿಗೂ ಗೊತ್ತಿರುವ ಮುಖ. ಒಟಿಟಿಯಲ್ಲಿ ಜೋಸೆಫ್ ನಟಿಸಿರುವ ಚಿತ್ರಗಳಿಗೆ ಉತ್ತಮ ಬೇಡಿಕೆ ಇದೆ. ಬ್ಯಾಕ್ ಟು ಬ್ಯಾಕ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗುವುದರ ಜತೆಗೆ, ಒಟಿಟಿಯಲ್ಲಿಯೂ ಮೋಡಿ ಮಾಡಿವೆ. ಇದೀಗ ಇದೇ ಬಾಸಿಲ್ ನಟಿಸಿರುವ ʻಮರಣಮಾಸ್ʼ ಸಿನಿಮಾ ಮೇ 15ರಿಂದ ಸೋನಿಲೀವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸದಲಿದೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಚಿತ್ರಮಂದಿರಗಳಲ್ಲಿ ಮಲಯಾಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.