Hassan, ಮೇ 5 -- "625ಕ್ಕೆ 625 ಅಂಕಗಳು ಬರುತ್ತೆ ಎನ್ನುವ ಆತ್ಮವಿಶ್ವಾಸ ಇತ್ತು. ಹಾಗಂತಾ ಟಾಪರ್ ಆಗಬೇಕು ಅನ್ನೋ ನಿರೀಕ್ಷೆಯಲ್ಲಿ ಓದಿಲ್ಲ. ದಿನವಿಡೀ ಕುಳಿತು ಓದಬೇಕು ಅನ್ನೋದು ಏನೂ ಇಲ್ಲ. ಓದುವ ಸಮಯದಲ್ಲಿ ಸರಿಯಾಗಿ ಆಸಕ್ತಿಯಿಂದ ಕುಳಿತು ನಿತ್ಯ ಎರಡು-ಮೂರು ಗಂಟೆ ಓದುತ್ತಿದ್ದೆ ಅಷ್ಟೇ." ಇದು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಟಾಪರ್ ಆಗಿರುವ ಹಾಸನದ ವಿದ್ಯಾರ್ಥಿ ಉತ್ಸವ್ ಪಟೇಲ್ ಮಾತು. ಹಾಸನ ಜಿಲ್ಲೆಯ ಚಿಕ್ಕಹೊನ್ನೇನಹಳ್ಳಿಯ ವಿಜಯಾ ಸ್ಕೂಲ್ನಲ್ಲಿ ಓದಿರುವ ಉತ್ಸವ್, ತಮ್ಮ ತಂದೆ-ತಾಯಿ ಮಾತ್ರವಲ್ಲದೆ ರಾಜ್ಯವೇ ಖುಷಿಪಡುವ ಸಾಧನೆ ಮಾಡಿದ್ದಾರೆ. ಇವರು ತಮ್ಮ ಓದು, ಪರೀಕ್ಷೆ ಸಿದ್ಧತೆ ಹಾಗೂ ಮುಂದಿನ ಯೋಜನೆ ಕುರಿತು ಎಚ್ಟಿ ಕನ್ನಡದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಎಲ್ಲಾ ವಿಷಯಗಳನ್ನು ಸಮನಾಗಿ ಓದುತ್ತಿದ್ದೆ. ಕನ್ನಡ, ಇಂಗ್ಲೀಷ್, ಹಿಂದಿ. ಹೀಗೆ ಭಾಷಾ ವಿಷಯಗಳನ್ನು ರಾತ್ರಿ ಓದುತ್ತಿದ್ದೆ. ಉಳಿದಂತೆ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಹಗಲು ಹೊತ್ತಿನಲ್ಲಿ ಓದುತ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.