ಭಾರತ, ಮಾರ್ಚ್ 15 -- 2005ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಐ ಲವ್​ ಯೂ ಜಹೀರ್ ಎಂದು ಪ್ಲೆಕಾರ್ಡ್ ಹಿಡಿದು ಪ್ರಪೋಸ್ ಮಾಡಿದ್ದ ಅಭಿಯಾನಿಯನ್ನು 20 ವರ್ಷಗಳ ನಂತರ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್​ ಜಹೀರ್ ಖಾನ್ ಭೇಟಿಯಾಗಿದ್ದಾರೆ. ಅವತ್ತು ಇಂಡೋ-ಪಾಕ್ ಮಧ್ಯೆ ಟಿವಿಎಸ್ ಕಪ್ ಟೆಸ್ಟ್ ಸರಣಿಯ ಪಂದ್ಯದಲ್ಲಿ 'ಐ ಲವ್ ಯು ಜಹೀರ್' ಪ್ಲೇಕಾರ್ಡ್ ಹಿಡಿದಿದ್ದ ಅಭಿಮಾನಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು.

ಜಹೀರ್ ಖಾನ್ ಅವರ ಪುನರ್ಮಿಲನದ ವಿಡಿಯೋವನ್ನು ಲಕ್ನೋ ಸೂಪರ್ ಜೈಂಟ್ಸ್ ಹಂಚಿಕೊಂಡಿದೆ. ಪ್ರಸಕ್ತ ಐಪಿಎಲ್​ಗೆ ಜಹೀರ್ ಎಲ್‌ಎಸ್‌ಜಿ ತಂಡವನ್ನು ಕೂಡಿಕೊಳ್ಳುತ್ತಿದ್ದಂತೆ, ಅದೇ ಅಭಿಮಾನಿ 'ಐ ಲವ್ ಯು ಜಹೀರ್' ಎಂಬ ಫ್ಲೇಕಾರ್ಡ್​ ಅವರನ್ನು ವೆಲ್​ಕಮ್ ಮಾಡಿದರು. ಇದು ಮಾಜಿ ವೇಗಿಯನ್ನು ಅಚ್ಚರಿ ಉಂಟು ಮಾಡಿತು. 20 ವರ್ಷಗಳ ಹಿಂದಿನ ಮತ್ತು ಈಗಿನ ವಿಡಿಯೋ ವೈರಲ್ ಆಗುತ್ತಿದೆ. ಅಭಿಮಾನಿ ಪ್ರಪೋಸ್ ಮಾಡಿದ್ದು ಬೇರೆಲ್ಲೂ ಅಲ್ಲ, ಬೆಂಗಳೂರಿನ ಎಂ ಚಿನ್ನಸ್ವಾಮಿ ...