ಭಾರತ, ಮೇ 5 -- ಸದ್ಯ ಐಪಿಎಲ್ ಜೋಶ್ ಜೋರಾಗಿದೆ. ಇದರ ನಡುವೆ ಐಸಿಸಿ ಶ್ರೇಯಾಂಕದಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡದ ಪ್ರಾಬಲ್ಯ ಮುಂದುವರೆದಿದೆ. ಭಾರತವು ಪುರುಷರ ಕ್ರಿಕೆಟ್ನ ವೈಟ್ ಬಾಲ್ ಸ್ವರೂಪದ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಏಕದಿನ ಮಾತ್ರವಲ್ಲದೆ ಟಿ20 ಸ್ವರೂಪದಲ್ಲಿಯೂ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡವು, ಅದಕ್ಕೂ ಮುಂಚೆಯೇ 2024ರಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆದ ಟಿ20 ವಿಶ್ವಕಪ್ ಅನ್ನು ಗೆದ್ದು ಬೀಗಿತ್ತು. ಹೀಗಾಗಿ ಎರಡೂ ಸ್ವರೂಪಗಳಲ್ಲಿ ವಿಶ್ವದ ಬಲಿಷ್ಠ ತಂಡವೆಂಬ ಪಟ್ಟ ಉಳಿಸಿಕೊಂಡಿದೆ.
ಈ ನಡುವೆ ಟೆಸ್ಟ್ ಶ್ರೇಯಾಂಕದಲ್ಲಿ ಭಾರತದ ಪ್ರದರ್ಶನ ಕಳಪೆಯಾಗಿದೆ. ತವರಿನಲ್ಲಿ ಕಿವೀಸ್ ವಿರುದ್ಧ ಸರಣಿ ಸೋತ ಬಳಿಕ, ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸಲು ಕೂಡಾ ಸಾಧ್ಯವಾಗಿಲ್ಲ. ಹೀಗಾಗಿ ಟೆಸ್ಟ್ ಶ್ರೇಯಾಂಕದಲ್ಲಿ ಒಂದು ಸ್ಥಾನವನ್ನು ಕಳೆದುಕೊಂಡು ಈಗ ನಾಲ್ಕನೇ ಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.