ಭಾರತ, ಮಾರ್ಚ್ 17 -- ದಕ್ಷಿಣ ಆಫ್ರಿಕಾದ ಆಲ್ರೌಂಡರ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಲೀಗಲ್ ನೋಟಿಸ್ ಕಳುಹಿಸಿದೆ. ಮುಂಬೈ ಇಂಡಿಯನ್ಸ್ ಪ್ರತಿನಿಧಿಸುತ್ತಿರುವ ಕಾರ್ಬಿನ್ ಬಾಷ್ ಅವರು ಪಾಕಿಸ್ತಾನ ಸೂಪರ್ ಲೀಗ್ ತೊರೆದು ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ನಿರ್ಧರಿಸಿದ ಕಾರಣಕ್ಕೆ ಪಿಸಿಬಿ ಈ ನೋಟಿಸ್ ನೀಡಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಲಿಜಾಡ್ ವಿಲಿಯಮ್ಸ್ ಗಾಯದಿಂದ ಟೂರ್ನಿಯಿಂದ ಹೊರಬಿದ್ದ ಹಿನ್ನೆಲೆ ಬದಲಿ ಆಟಗಾರನಾಗಿ ಅದೇ ದೇಶದ ಕಾರ್ಬಿನ್ ಬಾಷ್ ಆಯ್ಕೆಯಾದರು.
ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪರ ಪದಾರ್ಪಣೆ ಮಾಡಿದ ಬಾಷ್, ಜನವರಿ 13 ರಂದು ಲಾಹೋರ್ನಲ್ಲಿ ನಡೆದ ಪಿಎಸ್ಎಲ್ ಪ್ಲೇಯರ್ಸ್ ಡ್ರಾಫ್ಟ್ನ 10ನೇ ಸುತ್ತಿನಲ್ಲಿ ಡೈಮಂಡ್ ವಿಭಾಗದಲ್ಲಿ ಪೇಶಾವರ್ ಝಲ್ಮಿ ಪಾಲಾಗಿದ್ದರು. ಈಗವರು ಪಿಎಸ್ಎಲ್ ಬಿಟ್ಟು ಐಪಿಎಲ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಪಿಸಿಬಿ ಬಾಷ್ಗೆ ನೋಟಿಸ್ ಕಳುಹಿಸಿರುವ ಕುರಿತು ಪ್ರಕಟಣೆ ಹೊರಡಿಸಿದೆ. ಏಜೆಂಟ್ ಲೀಗಲ್ ನೋಟಿಸ್ ಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.