ಭಾರತ, ಮಾರ್ಚ್ 17 -- ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಲೀಗಲ್ ನೋಟಿಸ್ ಕಳುಹಿಸಿದೆ. ಮುಂಬೈ ಇಂಡಿಯನ್ಸ್ ಪ್ರತಿನಿಧಿಸುತ್ತಿರುವ ಕಾರ್ಬಿನ್ ಬಾಷ್ ಅವರು ಪಾಕಿಸ್ತಾನ ಸೂಪರ್ ಲೀಗ್​ ತೊರೆದು ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ನಿರ್ಧರಿಸಿದ ಕಾರಣಕ್ಕೆ ಪಿಸಿಬಿ ಈ ನೋಟಿಸ್ ನೀಡಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಲಿಜಾಡ್ ವಿಲಿಯಮ್ಸ್ ಗಾಯದಿಂದ ಟೂರ್ನಿಯಿಂದ ಹೊರಬಿದ್ದ ಹಿನ್ನೆಲೆ ಬದಲಿ ಆಟಗಾರನಾಗಿ ಅದೇ ದೇಶದ ಕಾರ್ಬಿನ್ ಬಾಷ್ ಆಯ್ಕೆಯಾದರು.

ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪರ ಪದಾರ್ಪಣೆ ಮಾಡಿದ ಬಾಷ್, ಜನವರಿ 13 ರಂದು ಲಾಹೋರ್​ನಲ್ಲಿ ನಡೆದ ಪಿಎಸ್ಎಲ್ ಪ್ಲೇಯರ್ಸ್ ಡ್ರಾಫ್ಟ್​​ನ 10ನೇ ಸುತ್ತಿನಲ್ಲಿ ಡೈಮಂಡ್ ವಿಭಾಗದಲ್ಲಿ ಪೇಶಾವರ್ ಝಲ್ಮಿ ಪಾಲಾಗಿದ್ದರು. ಈಗವರು ಪಿಎಸ್​​ಎಲ್ ಬಿಟ್ಟು ಐಪಿಎಲ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಪಿಸಿಬಿ ಬಾಷ್​ಗೆ ನೋಟಿಸ್ ಕಳುಹಿಸಿರುವ ಕುರಿತು ಪ್ರಕಟಣೆ ಹೊರಡಿಸಿದೆ. ಏಜೆಂಟ್ ಲೀಗಲ್ ನೋಟಿಸ್ ಕ...