ಬೆಂಗಳೂರು, ಮೇ 11 -- ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಐಪಿಎಲ್ 2025ರ ಋತುವಿನ ಪುನರಾರಂಭ ಕುರಿತ ಚರ್ಚೆ ಚಿಗುರೊಡೆದಿದೆ. ಟೂರ್ನಿಯನ್ನು ತಕ್ಷಣವೇ ಪುನರಾರಂಭಿಸುವ ಸಾಧ್ಯತೆಗಳನ್ನು ಬಿಸಿಸಿಐ ಅನ್ವೇಷಿಸುತ್ತಿದೆ ಎಂದು ವರದಿಯಾಗಿದೆ. ಹಾಗಂತಾ ಈ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ಹೊರಬರಬೇಕಿದೆ. ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿದ್ದರೂ, ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಕುರಿತು ವರದಿಯಾಗುತ್ತಲೇ ಇದೆ. ಅಲ್ಲದೆ ನಾಳೆ (ಮೇ 12, ಸೋಮವಾರ) ಉಭಯ ರಾಷ್ಟ್ರಗಳ ಸೇನಾ ಪ್ರಮುಖರ ನಡುವೆ ಮತ್ತೊಮ್ಮೆ ಮಾತುಕತೆಯಾಗಲಿದೆ. ಹೀಗಾಗಿ ಟೂರ್ನಿಯ ಮರುಆರಂಭದ ನಿರ್ಧಾರ ತ್ವರಿತವಾಗಿ ಆಗುವ ಸಾಧ್ಯತೆ ಸದ್ಯಕ್ಕಿಲ್ಲ ಎಂದು ತೋರುತ್ತಿದೆ.
ಕದನ ವಿರಾಮ ಘೋಷಣೆಯ ಬಳಿಕ ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ಬಿಸಿಸಿಐ ಈಗ ವೇಳಾಪಟ್ಟಿಯನ್ನು ರೂಪಿಸುತ್ತಿದೆ. ಪಂದ್ಯಾವಳಿಯನ್ನು ಪುನರಾರಂಭಿಸುವ ಬಗ್ಗೆ ಎಲ್ಲಾ ಪಾಲುದಾರರೊಂದಿಗೆ ಮಾತನಾಡುತ್ತಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.