ಭಾರತ, ಏಪ್ರಿಲ್ 26 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮತ್ತೊಂದು ಶ್ರೇಷ್ಠ ಕ್ಯಾಚ್ ದಾಖಲೆಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ - ಸನ್ರೈಸರ್ಸ್ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಈ ಅತ್ಯದ್ಭುತ ಕ್ಯಾಚ್ ದಾಖಲಾಗಿದೆ. ಎಸ್ಆರ್ಹೆಚ್ ಬ್ಯಾಟರ್ ಕಮಿಂದು ಮೆಂಡೀಸ್ ಅವರು ಸಿಎಸ್ಕೆ ತಂಡದ ಡೆವಾಲ್ಡ್ ಬ್ರೆವಿಸ್ ಅವರ ಕ್ಯಾಚ್ ಅನ್ನು ಚಿರತೆಯಂತೆ ಹಾರಿ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಕ್ಯಾಚ್ ವಿಡಿಯೋ ವೈರಲ್ ಆಗಿದೆ.
ಈ ಒಂದು ಕ್ಯಾಚ್ ಸಿಎಸ್ಕೆ ತಂಡದ ವೇಗದ ಸ್ಕೋರ್ಗೆ ಅಡ್ಡಗೋಡೆಯಾಯಿತು. ಡೆವಾಲ್ಡ್ ಬ್ರೇವಿಸ್ ಆಗ ತಾನೇ ಬಿರುಸಿನ ಬ್ಯಾಟಿಂಗ್ಗೆ ಕೈ ಹಾಕಿದ್ದರು. ತಂಡದ ಮೊತ್ತ 200ರ ಗಡಿ ದಾಟಿಸುವ ಭರವಸೆಯೂ ಮೂಡಿಸಿದ್ದ. ಆದರೆ, ಬ್ರೆವಿಸ್ ಔಟಾಗುತ್ತಿದ್ದಂತೆ 160ರ ಗಡಿ ದಾಟಲೂ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಈ ಅದ್ಭುತ ಕ್ಯಾಚ್. ಡೆವಾಲ್ಡ್ 25 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಿತ 42 ರನ್ ಗಳಿಸಿ ಔಟಾದರು.
ಎಸ್ಆರ್ಹೆಚ್ ಬೌಲರ್ ಹರ್ಷಲ್ ಪಟೇಲ್ ಸಿಎಸ್ಕೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.