ಭಾರತ, ಏಪ್ರಿಲ್ 26 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಮತ್ತೊಂದು ಶ್ರೇಷ್ಠ ಕ್ಯಾಚ್ ದಾಖಲೆಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ - ಸನ್​ರೈಸರ್ಸ್ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಈ ಅತ್ಯದ್ಭುತ ಕ್ಯಾಚ್ ದಾಖಲಾಗಿದೆ. ಎಸ್​​ಆರ್​​ಹೆಚ್ ಬ್ಯಾಟರ್​ ಕಮಿಂದು ಮೆಂಡೀಸ್ ಅವರು ಸಿಎಸ್​ಕೆ ತಂಡದ ಡೆವಾಲ್ಡ್ ಬ್ರೆವಿಸ್ ಅವರ ಕ್ಯಾಚ್ ಅನ್ನು ಚಿರತೆಯಂತೆ ಹಾರಿ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಕ್ಯಾಚ್ ವಿಡಿಯೋ ವೈರಲ್ ಆಗಿದೆ.

ಈ ಒಂದು ಕ್ಯಾಚ್​ ಸಿಎಸ್​ಕೆ ತಂಡದ ವೇಗದ ಸ್ಕೋರ್​​ಗೆ ಅಡ್ಡಗೋಡೆಯಾಯಿತು. ಡೆವಾಲ್ಡ್ ಬ್ರೇವಿಸ್ ಆಗ ತಾನೇ ಬಿರುಸಿನ ಬ್ಯಾಟಿಂಗ್​ಗೆ ಕೈ ಹಾಕಿದ್ದರು. ತಂಡದ ಮೊತ್ತ 200ರ ಗಡಿ ದಾಟಿಸುವ ಭರವಸೆಯೂ ಮೂಡಿಸಿದ್ದ. ಆದರೆ, ಬ್ರೆವಿಸ್ ಔಟಾಗುತ್ತಿದ್ದಂತೆ 160ರ ಗಡಿ ದಾಟಲೂ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಈ ಅದ್ಭುತ ಕ್ಯಾಚ್​. ಡೆವಾಲ್ಡ್​ 25 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಿತ 42 ರನ್ ಗಳಿಸಿ ಔಟಾದರು.

ಎಸ್​​ಆರ್​​ಹೆಚ್​ ಬೌಲರ್ ಹರ್ಷಲ್ ಪಟೇಲ್ ಸಿಎಸ್​ಕೆ...