ಭಾರತ, ಮೇ 18 -- 2019, ಫೆಬ್ರವರಿ 24ರಂದು 19ರ ಹರೆಯದ ವಿದ್ಯಾರ್ಥಿನಿ ಆಕೆಯ ಸಹೋದರನ ಜತೆ ತಮಿಳುನಾಡಿನ ಪೊಲ್ಲಾಚಿಯ ಪೂರ್ವ ಪೊಲೀಸ್ ಠಾಣೆಗೆ ಬಂದು ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದ್ದರು. ಪೊಲ್ಲಾಚಿಯಲ್ಲಿ ಹೀಗೊಂದು ಅಪರಾಧ ನಡೆದಿರುವುದು ಶರವೇಗದಲ್ಲಿ ಎಲ್ಲೆಡೆ ಸುದ್ದಿಯಾಯಿತು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಈ ಪ್ರಕರಣ ಪ್ರಧಾನ ವಿಷಯವಾಗಿತ್ತು. ಈ ಪ್ರಕರಣ ನಡೆದ 6 ವರ್ಷಗಳ ಬಳಿಕ ಅಂದರೆ 2025 ಮೇ 13ರಂದು ಲೈಂಗಿಕ ದೌರ್ಜನ್ಯವೆಸಗಿದ 9 ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಪು ನೀಡಿದ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2019 ಫೆಬ್ರುವರಿ 24ರಂದು ಹುಡುಗನೊಬ್ಬ ಫೇಸ್ಬುಕ್ನಲ್ಲಿ ಹುಡುಗಿಯ ಪ್ರೊಫೈಲ್ ಕ್ರಿಯೇಟ್ ಮಾಡಿ, ಹುಡುಗಿಯಂತೆ ಚಾಟ್ ಮಾಡಿ ಸಂತ್ರಸ್ತ ಹುಡುಗಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಆತ ಭೇಟಿಯಾಗಬೇಕು ಎಂದು ಹೇಳಿ ಅವಳನ್ನು ಕರೆಸಿಕೊಂಡಿದ್ದ. ಭೇಟಿಯಾಗಲು ಹೋದಾಗ ನಾಲ್ವರು ಹುಡುಗರು ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿ ಸಾಮೂಹಿಕ ಅತ್ಯಾಚಾರಕ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.