Bengaluru, ಮೇ 9 -- ಕಲರ್ಸ್ ಕನ್ನಡದಲ್ಲಿ ಬಹುನಿರೀಕ್ಷೆಯ ಮೂಲಕ ಆರಂಭವಾದ ಸೀರಿಯಲ್ಗಳಲ್ಲಿ ʻನೂರು ಜನ್ಮಕೂʼ ಸಹ ಒಂದು. ಹಾರರ್ ಫ್ಯಾಂಟಸಿ ಸೀರಿಯಲ್ನಲ್ಲಿ ಆತ್ಮದ ಕಾಟದ ಜತೆಗೆ ದೈವದ ಲೀಲೆಯೂ ಈ ಸೀರಿಯಲ್ನ ಹೈಲೈಟ್. ಆದರೆ, ಆರಂಭದಲ್ಲಿನ ಆ ಕೌತುಕ ದಿನಗಳೆಂದಂತೆ ಮುಂದುವರಿಯಲಿಲ್ಲ. ಟಿಆರ್ಪಿಯಲ್ಲಿಯೂ ಮೋಡಿ ಮಾಡಲಿಲ್ಲ. ಆ ಕಾರಣಕ್ಕೆ ಇನ್ನೇನು ಈ ಸೀರಿಯಲ್ಲೇ ಕೊನೆಯಾಯ್ತು ಎನ್ನುವಷ್ಟರಲ್ಲಿ, ವಾರಾಂತ್ಯಕ್ಕೆ ಶಿಫ್ಟ್ ಆಯ್ತು. ಇದೀಗ ಇದೇ ಸೀರಿಯಲ್ನಿಂದ ಮತ್ತೊಂದು ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ.
ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ನೂರು ಜನ್ಮಕೂ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ನ ನಾಯಕನಾಗಿ ಚಿರಂಜೀವಿ ಪಾತ್ರದಲ್ಲಿ ಧನುಷ್ ಗೌಡ ನಟಿಸುತ್ತಿದ್ದರು. ಈ ಮೊದಲು ಗೀತಾ ಸೀರಿಯಲ್ ಮೂಲಕ ಜನಮನಗೆದ್ದ ಧನುಷ್, ಹಾರರ್ ಫ್ಯಾಂಟಸಿ ಕಥೆಯ ಮೂಲಕ ಮತ್ತೆ ಆಗಮಿಸಿದ್ದರು. ಆದರೆ, ಆ ಸೀರಿಯಲ್ ನಿರೀಕ್ಷಿತ ಗುರಿ ತಲುಪಲಿಲ್ಲ. ಹೀಗಿರುವಾಗಲೇ ಇದೇ ʻನೂರು ಜನ್ಮಕೂʼ ಸೀರಿಯಲ್ನಿಂದ ಧ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.