Bengaluru, ಮೇ 9 -- ಕಲರ್ಸ್‌ ಕನ್ನಡದಲ್ಲಿ ಬಹುನಿರೀಕ್ಷೆಯ ಮೂಲಕ ಆರಂಭವಾದ ಸೀರಿಯಲ್‌ಗಳಲ್ಲಿ ʻನೂರು ಜನ್ಮಕೂʼ ಸಹ ಒಂದು. ಹಾರರ್‌ ಫ್ಯಾಂಟಸಿ ಸೀರಿಯಲ್‌ನಲ್ಲಿ ಆತ್ಮದ ಕಾಟದ ಜತೆಗೆ ದೈವದ ಲೀಲೆಯೂ ಈ ಸೀರಿಯಲ್‌ನ ಹೈಲೈಟ್‌. ಆದರೆ, ಆರಂಭದಲ್ಲಿನ ಆ ಕೌತುಕ ದಿನಗಳೆಂದಂತೆ ಮುಂದುವರಿಯಲಿಲ್ಲ. ಟಿಆರ್‌ಪಿಯಲ್ಲಿಯೂ ಮೋಡಿ ಮಾಡಲಿಲ್ಲ. ಆ ಕಾರಣಕ್ಕೆ ಇನ್ನೇನು ಈ ಸೀರಿಯಲ್ಲೇ ಕೊನೆಯಾಯ್ತು ಎನ್ನುವಷ್ಟರಲ್ಲಿ, ವಾರಾಂತ್ಯಕ್ಕೆ ಶಿಫ್ಟ್‌ ಆಯ್ತು. ಇದೀಗ ಇದೇ ಸೀರಿಯಲ್‌ನಿಂದ ಮತ್ತೊಂದು ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ.

ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ನೂರು ಜನ್ಮಕೂ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್‌ನ ನಾಯಕನಾಗಿ ಚಿರಂಜೀವಿ ಪಾತ್ರದಲ್ಲಿ ಧನುಷ್‌ ಗೌಡ ನಟಿಸುತ್ತಿದ್ದರು. ಈ ಮೊದಲು ಗೀತಾ ಸೀರಿಯಲ್‌ ಮೂಲಕ ಜನಮನಗೆದ್ದ ಧನುಷ್‌, ಹಾರರ್‌ ಫ್ಯಾಂಟಸಿ ಕಥೆಯ ಮೂಲಕ ಮತ್ತೆ ಆಗಮಿಸಿದ್ದರು. ಆದರೆ, ಆ ಸೀರಿಯಲ್‌ ನಿರೀಕ್ಷಿತ ಗುರಿ ತಲುಪಲಿಲ್ಲ. ಹೀಗಿರುವಾಗಲೇ ಇದೇ ʻನೂರು ಜನ್ಮಕೂʼ ಸೀರಿಯಲ್‌ನಿಂದ ಧ...