ಭಾರತ, ಮೇ 5 -- ಎಸ್ಎಸ್ಎಲ್ಸಿ ಫಲಿತಾಂಶ: ಕಳೆದ ಮೂರು ದಿನಗಳಿಂದ ಬಾಗಲಕೋಟೆ ನವನಗರದ ವಿದ್ಯಾರ್ಥಿಯೊಬ್ಬ 6ಕ್ಕೆ 6 ವಿಷಯದಲ್ಲಿ ಫೇಲ್ ಆಗಿದ್ದರೂ ಅಪ್ಪ, ಅಮ್ಮ ಆತನಿಗೆ ಕೇಕ್ ತಿನ್ನಿಸಿ, ಪ್ರಯತ್ನ ಕೈಬಿಡಬೇಡ, ಮತ್ತೆ ಪರೀಕ್ಷೆ ಬರೆದು ಪಾಸ್ ಆಗು ಎಂದು ಧೈರ್ಯ ತುಂಬಿದ ವಿಚಾರ ವೈರಲ್ ಆಗಿದೆ. ಭಾರತದ ಉದ್ದಗಲಕ್ಕೂ ಇದು ಚರ್ಚೆಗೆ ಗ್ರಾಸವಾಗಿದೆ. ಅಪ್ಪ-ಅಮ್ಮನ ನಡೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು, ಎಲ್ಲರ ಗಮನವೂ ಅವರತ್ತ ನೆಟ್ಟಿದೆ. ಬಾಲಕನ ಹೆಸರು ಅಭಿಷೇಕ್. ಈತ ಬಾಗಲಕೋಟೆಯ ಛಾಯಾಗ್ರಾಹಕ ಯಲ್ಲಪ್ಪ ಚೊಳಚಗುಡ್ಡ ಅವರ ಪುತ್ರ. ಬಾಗಲಕೋಟೆಯ ಬಸವೇಶ್ವರ ಹೈಸ್ಕೂಲ್ನಲ್ಲಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿ.
ಅಭಿಷೇಕ್ ಈ ವಿದ್ಯಮಾನದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುತ್ತ, "ಎಸ್ಎಸ್ಎಲ್ಸಿ ಫೇಲ್ ಆಗಿರಬಹುದು, ಸೋಲಬೇಡ ಎಂದು ಕೇಕ್ ತಿನ್ನಿಸಿದರು ಅಪ್ಪ, ಅಮ್ಮ" ಎಂದು ಹೇಳಿದ್ದ. ಈ ಮಾತುಗಳು ನಿಜಕ್ಕೂ ಅಭಿಷೇಕ್ ಆತ್ಮವಿಶ್ವಾಸದ ಹಿಂದೆ ನೋವಿದೆ, ಹೋರಾಟವೂ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಈ ಸುದ್ದಿ ನೋಡಿದ ಕೆಲವರಿಗಾದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.