ಭಾರತ, ಮಾರ್ಚ್ 23 -- ಐಪಿಎಲ್ 18ನೇ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಆರಂಭ ಪಡೆದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅಬ್ಬರದ ಆಟ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಯುವ ಆಟಗಾರನೊಬ್ಬ ಪದಾರ್ಪಣೆ ಮಾಡಿದ್ದಾರೆ. ಅವರೇ ಅನಿಕೇತ್ ವರ್ಮಾ (Aniket Verma). ಉತ್ತರ ಪ್ರದೇಶದ ಝಾನ್ಸಿಯಲ್ಲಿ ಜನಿಸಿದ ಅನಿಕೇತ್ ವರ್ಮಾ, ಭಾರತೀಯ ಕ್ರಿಕೆಟ್ನಲ್ಲಿ ಭರವಸೆಯ ಬಲಗೈ ಬ್ಯಾಟರ್. ಅಷ್ಟೇ ಅಲ್ಲ ಬಲಗೈ ಮಧ್ಯಮ ವೇಗದ ಬೌಲರ್. 2002ರ ಫೆಬ್ರುವರಿ 5ರಂದು ಜನಿಸಿದ ಅನಿಕೇತ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದಲೇ ಗುರುತಿಸಿಕೊಂಡಿದ್ದಾರೆ.
ಎಸ್ಆರ್ಎಚ್ ಪರ ಐಪಿಎಲ್ ಪದಾರ್ಪಣೆ ಮಾಡಿರುವ ಈ ಯುವ ಆಟಗಾರ ಯಾರು ಎಂಬುದನ್ನು ತಿಳಿಯೋಣ. ಅನಿಕೇತ್ ತಮ್ಮ ಕ್ರಿಕೆಟ್ ಪ್ರಯಾಣ ಆರಂಭಿಸಿದ್ದು ಮಧ್ಯಪ್ರದೇಶದಲ್ಲಿ. ವಿವಿಧ ದೇಶೀಯ ಪಂದ್ಯಾವಳಿಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. 23 ವರ್ಷದೊಳಗಿನವರ ಏಕದಿನ ಅಂತರ-ರಾಜ್ಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕದ ತಂಡದ ವಿರುದ್ಧ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.