ಭಾರತ, ಏಪ್ರಿಲ್ 13 -- ಲಾಸ್‌ ಎಂಜಲೀಸ್‌ನಲ್ಲಿರುವ ಶಾರುಖ್ ಖಾನ್ ಅವರ ಲಾ ಮ್ಯಾನ್‌ಷನ್‌ ತುಂಬಾನೇ ಐಷಾರಾಮಿಯಾಗಿದೆ. ‌‌ಈ ಮನೆಯಲ್ಲಿ ಸ್ವಿಮ್ಮಿಂಗ್ ಫೂಲ್‌, ಭವ್ಯವಾದ ಅಡುಗೆ, ಲಾನ್‌, ಗಾರ್ಡನ್‌, ಗೇಮಿಂಗ್ ಝೋನ್‌ ಎಲ್ಲವೂ ಇದೆ. ಇಲ್ಲಿ ಉಳಿದುಕೊಳ್ಳಲು ದಿನಕ್ಕೆ 2 ಲಕ್ಷ ರೂ ಬಾಡಿಗೆ ಕೊಡಬೇಕು.

ಅರಮನೆಯಂತಿರುವ ಈ ಐಷಾರಾಮಿ ಮನೆಯಲ್ಲಿ ಒಂದು ದೊಡ್ಡ ಈಜುಕೊಳವಿದೆ. ಈ ಚಿತ್ರವನ್ನು ಸ್ವತಃ ಶಾರುಖ್‌ ಖಾನ್‌ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಈಜುಕೊಳದ ದಂಡೆಯ ಮೇಲೆ ಕೂತು ಫೋಟೊಗೆ ಪೋಸ್ ನೀಡಿರುವುದನ್ನು ಕಾಣಬಹುದು.

ಇದು ಕಿಂಗ್ ಖಾನ್ ಮನೆಯ ಸುಂದರವಾದ ಸ್ನಾನಗೃಹ. ಇದನ್ನು ನೋಡಿದರೆ ರಾಜಮನೆತನದ ಸ್ನಾನಗೃಹಗಳು ನೆನಪಾಗುವುದು ಸುಳ್ಳಲ್ಲ. ಈ ಸ್ನಾನಗೃಹವು ಒಂದು ಹಾಲ್‌ನಷ್ಟು ದೊಡ್ಡದಾಗಿದೆ. ಇಲ್ಲಿ ವಿವಿಧ ರೀತಿ ಸೆಂಟೆಂಟ್ ಕ್ಯಾಂಡಲ್‌ಗಳನ್ನು ನೋಡಬಹುದು.

ಗೋಡೆಯ ಮೇಲೆ ಐಷಾರಾಮಿ ಸೋಫಾ, ದುಬಾರಿ ಚಿತ್ರಕಲೆ ಕಾಣಬಹುದು. ಇಲ್ಲಿ ಉಳಿದುಕೊಳ್ಳುವವರು ಈ ಸುಂದರ ಸ್ಥಳದಲ್ಲಿ ವಿಶ್ರಾಂತಿ ಪಡೆಯಬಹುದು.

ಮನೆಯ ಈಜುಕೊಳ ಮತ್ತು ಹ...