ಭಾರತ, ಏಪ್ರಿಲ್ 30 -- ನವದೆಹಲಿ: ಮೇ 1 ರಿಂದ ಜಾರಿಗೆ ಬರುವಂತೆ ದೇಶದಾದ್ಯಂತ ಕೆಲವು ಪ್ರಮುಖ ಆರ್ಥಿಕ ಬದಲಾವಣೆಗಳು ಜಾರಿಗೆ ಬರಲಿವೆ. ಪ್ರಾದೇಶಿಕ ಬ್ಯಾಂಕುಗಳನ್ನು ಕ್ರೋಢೀಕರಿಸುವ ಮೂಲಕ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲು ಸರ್ಕಾರವು ತನ್ನ ಹೆಜ್ಜೆಯನ್ನು ಮುಂದಿಡಲಿದೆ. ಎಟಿಎಂ ವಹಿವಾಟು ಶುಲ್ಕದಲ್ಲಿ ಏರಿಕೆಯಾಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಟಿಎಂ ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸಲು ಅನುಮೋದಿಸಿದ ನಂತರ, ಒಂದು ಬ್ಯಾಂಕ್ ತನ್ನ ಸೇವೆಗಳನ್ನು ಬಳಸುವುದಕ್ಕಾಗಿ ಮತ್ತೊಂದು ಬ್ಯಾಂಕ್ಗೆ ಪಾವತಿಸುವ ಮೊತ್ತ ಹೆಚ್ಚಾಗುತ್ತದೆ. ಈ ಕಾರಣದಿಂದ ಗ್ರಾಹಕರು ಎಟಿಎಂನಿಂದ ಹಣ ವಿತ್ಡ್ರಾ ಮಾಡುವಾಗ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ತಿಂಗಳಿಗೆ ನಿಗದಿಯಾಗಿರುವ ಎಟಿಎಂ ವಿತ್ ಡ್ರಾವಲ್ ಸಂಖ್ಯೆ ಮುಗಿದ ನಂತರ ಹೆಚ್ಚುವರಿ ವಹಿವಾಟಿಗೆ 23 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಈ ಹಿಂದೆ ಪ್ರತಿ ವಹಿವಾಟಿನ ಮೇಲೆ 21 ರೂ ಇದ್ದು, ಇನ್ನು ಮುಂದೆ 2 ರೂ ಹೆಚ್ಚು ಪಾವತಿಸಬೇಕಾಗುತ್ತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.