Bengaluru, ಫೆಬ್ರವರಿ 22 -- TCS MBA Hiring 2025: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ "ಟಿಸಿಎಸ್‌ ಎಂಬಿಎ ಹೈರಿಂಗ್‌- ಬ್ಯಾಚ್‌ 2025"ಕ್ಕೆ ಅರ್ಹ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಆಸಕ್ತರು ಇದೇ ಫೆಬ್ರವರಿ 25ರ ಮೊದಲು ಅರ್ಜಿ ಸಲ್ಲಿಸಬಹುದು.

ಎರಡು ವರ್ಷಗಳ ಕಾಲ ಎಂಬಿಎ/ಎಂಎಂಎಸ್‌/ ಪಿಜಿಡಿಬಿಎ/ಪಿಜಿಡಿಎಂ ಕೋರ್ಸ್‌ಗಳನ್ನು ಮಾರ್ಕೆಟಿಂಗ್‌/ ಫೈನಾನ್ಸ್‌/ ಆಪರೇಷನ್ಸ್‌/ ಸಪ್ಲೈಚೇನ್‌ ಮ್ಯಾನೇಜ್‌ಮೆಂಟ್‌/ ಇನ್‌ಫಾರ್ಮೆಷನ್‌ ಟೆಕ್ನಾಲಜಿ/ ಜನರಲ್‌ ಮ್ಯಾನೇಜ್‌ಮೆಂಟ್‌/ ಬಿಸ್ನೆಸ್‌ ಅನಾಲಿಟಿಕ್ಸ್‌/ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌/ ಹ್ಯೂಮನ್‌ ರಿಸೋರ್ಸ್‌ ಇತ್ಯಾದಿ ವಿಷಯಗಳಲ್ಲಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.

ಆಸಕ್ತರು ಮೊದಲು ಟಿಸಿಎಸ್‌ ನೆಕ್ಟ್‌ ಸ್ಟೆಪ್‌ ಪೋರ್ಟಲ್‌ಗೆ ಲಾಗಿನ್‌ ಆಗಬೇಕು. ಅಲ್ಲಿ ಅಪ್ಲೈ ಕ್ಲಿಕ್‌ಮಾಡಿ. ನೀವು ಈಗಾಗಲೇ ಈ ಪೋರ್ಟಲ್‌ನಲ್ಲಿ ನೋಂದಣಿ ಮಾಡಿದ್ದರೆ ಐಟಿ ವಿಭಾಗದಲ್ಲಿ ಟಿಸಿಎಸ್‌ ರೆಫರೆನ್ಸ್‌ ಐಡಿ ಮೂಲಕ ಲ...