Bengaluru, ಮೇ 24 -- ಅಂಕೋಲ: ವೈವಿಧ್ಯಮಯ ರುಚಿ ಮತ್ತು ತಳಿಗಳ ಮಾವಿನ ಹಣ್ಣುಗಳನ್ನು ಮಾವು ಪ್ರಿಯರಿಗೆ ಪರಿಚಯಿಸುವ ಉದ್ದೇಶದಿಂದ ಬೆಳೆಗಾರರ ಸಮಿತಿ ಉತ್ತರ ಕನ್ನಡ ಸಹಯೋಗದಲ್ಲಿ ಅಂಕೋಲದಲ್ಲಿ ಎರಡು ದಿನಗಳ ಮಾವು ಮೇಳ ಆಯೋಜಿಸಲಾಗಿದೆ. ಮೇ 24 ಶನಿವಾರ ಮತ್ತು ಮೇ 25 ಭಾನುವಾರದಂದು ಎರಡು ದಿನಗಳ ಕಾಲ ಅಂಕೋಲದ ಜೈಹಿಂದ್ ಹೈಸ್ಕೂಲ್ ಆವರಣದಲ್ಲಿ ಮಾವು ಮೇಳ ನಡೆಯಲಿದೆ. ಈ ಮಾವು ಮೇಳದಲ್ಲಿ ಉತ್ತರ ಕನ್ನಡದ ವಿವಿಧ ಭಾಗಗಳ ಮಾವು ಬೆಳೆಗಾರರು ಭಾಗವಹಿಸಿ ವ್ಯಾಪಾರ ವಹಿವಾಟು ನಡೆಸಲು ಮುಕ್ತ ಅವಕಾಶ ಇದೆ ಎಂದು ಬೆಳೆಗಾರರ ಸಮಿತಿಯ ಅಧ್ಯಕ್ಷ, ಮಾವು ಮೇಳದ ಸಂಘಟಕ ನಾಗರಾಜ ನಾಯಕ ತಿಳಿಸಿದ್ದಾರೆ.
ಮೇ.24 ರಂದು ಬೆಳಗ್ಗೆ ಮಾವು ಮೇಳವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಉದ್ಘಾಟಿಸಲಿದ್ದಾರೆ. ನಂತರ ಚಾಲ್ತಿ ಮಾವಿನ ಮರಗಳ ಕುರಿತು ಪರಿಸರ ಬರಹಗಾರ ಶಿವಾನಂದ ಕಳವೆ ಅವರಿಂದ ಉಪನ್ಯಾಸ ನಡೆಯಲಿದೆ. ಮಾವು ಬೆಳೆಗಾರರಿಗೆ ಉತ್ತೇಜನ ನೀಡುವುದು ಮತ್ತು ಜಿಲ್ಲೆಯ ವೈವಿಧ್ಯಮಯ ಮಾವಿನ ಹಣ್ಣುಗಳನ್ನು ಮಾವು ಪ್ರಿಯರಿಗೆ ಪರಿಚಯಿಸು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.