Bangalore, ಮೇ 22 -- ಈ ವೀಕೆಂಡ್‌ನಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕೆನ್ನುವವರಿಗೆ ಹಲವು ಆಯ್ಕೆಗಳು ಇವೆ. ಅವುಗಳಲ್ಲಿ ಕೆಲವೇ ಕೆಲವು ಸಿನಿಮಾಗಳು ಮಾತ್ರ ನಿರೀಕ್ಷೆ ಹುಟ್ಟುಹಾಕಿವೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು ಸಿನಿಮಾಗಳ ವಿವರ ಇಲ್ಲಿದೆ.

ಜೈ ಕಿಸಾನ್‌: ಜೈಕಿಸಾನ್‌ ಎಂಬ ಕನ್ನಡ ಸಿನಿಮಾ ಮೇ 23ರಂದು ರಿಲೀಸ್‌ ಆಗುತ್ತಿದೆ. ಸ್ಮಿತಾ ತಂಬೆ, ಜನಮೇಜಯ್‌ ತೆಲಂಗ್‌, ಗಣೇಶ್‌ ಯಾದವ್‌, ಪ್ರಕಾಶ್‌ ದೋತ್ರೆ ಮುಂತಾದವರು ನಟಿಸಿದ್ದಾರೆ.

ಕಿರಿಕ್‌: ರವಿ ಶೆಟ್ಟಿ, ಪೂಜಾ ರಾಮಚಂದ್ರ, ಬಾಲಾ ರಾಜ್‌ವಾಡಿ, ಕುರಿ ರಂಗ, ಸೀರುಂಡೆ ರಘು, ಟೆನ್ನಿಸ್‌ ಕೃಷ್ಣಾ ಸೇರಿದಂತೆ ಹಲವು ಕಲಾವಿದರು ನಟಿಸಿರುವ ಕಿರಿಕ್‌ ಸಿನಿಮಾವೂ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಕುಲದಲ್ಲಿ ಕೀಳ್ಯಾವುದೋ: ಮಡೆನೂರು ಮನು ನಟಿಸಿರುವ ಸಿನಿಮಾ ನಾಳೆ ರಿಲೀಸ್‌ ಆಗಲಿದೆ. ಈ ಚಿತ್ರದ ನಾಯಕ ನಟ ಮನು ಇಂದು ರೇಪ್‌ ಕೇಸ್‌ನಲ್ಲಿ ಅರೆಸ್ಟ್‌ ಆಗಿದ್ದಾರೆ. ಇದು ಚಿತ್ರ ಬಿಡುಗಡೆಯ ಮೇಲೆ ಅನಿ...