ಭಾರತ, ಮೇ 27 -- ಗುರು ಪೂರ್ಣಿಮೆ, ವಿಶ್ವಾವಸು ನಾಮ ಸಂವತ್ಸರ, 2025: ಸನಾತನ ಹಿಂದೂ ಪಂಚಾಂಗದ ಕಾಲಗಣನೆಯಂತೆ ಪ್ರತಿ ಮಾಸ ಅಥವಾ ತಿಂಗಳು ತಲಾ 15 ದಿನಗಳ ಎರಡು ಪಕ್ಷಗಳನ್ನು ಹೊಂದಿರುತ್ತವೆ. ಇವುಗಳನ್ನು ಶುಕ್ಲ ಪಕ್ಷ ಹಾಗೂ ಕೃಷ್ಣಪಕ್ಷಗಳೆಂದು ಕರೆಯಲಾಗುತ್ತೆ. ಒಂದು ಮಾಸದಲ್ಲಿ ಒಂದು ಪೌರ್ಣಮಿ ಹಾಗೂ ಒಂದು ಅಮಾವಾಸ್ಯೆ ಬರುತ್ತವೆ. ಶುಕ್ಲಪಕ್ಷದ ಕೊನೆಯ ದಿನವಾದ ಪೌರ್ಣಮಿಯನ್ನು ಬಹಳ ಪವಿತ್ರವಾದುದೆಂದು ಪರಿಗಣಿಸಲಾಗುತ್ತದೆ. ಪೌರ್ಣಮಿಯಂದು ಅನೇಕ ಪೂಜೆ ಹಾಗೂ ವ್ರತಾನುಷ್ಠಾನಗಳನ್ನು ಆಚರಿಸಲಾಗುತ್ತದೆ. ಅದರೆ, ಆಷಾಢಮಾಸದಲ್ಲಿ ಬರುವ ಪೌರ್ಣಮಿ ಅತ್ಯಂತ ಮಹತ್ವದ್ದಾಗಿದ್ದು ಅದನ್ನು ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಅದಕ್ಕೆ ವ್ಯಾಸಪೌರ್ಣಮಿ ಹಾಗೂ ವೇದ ಪೌರ್ಣಮಿ ಎಂದೂ ಸಹ ಕರೆಯಲಾಗುತ್ತದೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ, ತಾಯಿ-ತಂದೆಗೆ ದೇವರ ಸ್ಥಾನವನ್ನು ನೀಡಲಾಗಿದ್ದು ಗುರುವಿಗೂ ಸಹ ದೇವರಿಗೆ ಸಮಾನವಾದ ಸ್ಥಾನವನ್ನೇ ನೀಡಲಾಗಿದೆ. "ಹರ ಮುನಿದರೆ ಗುರು ಕಾಯ್ವ" ಎಂಬ ಮಾತು ನಮ್ಮಲ್ಲಿ ಜನಜನಿತವಾಗಿದೆ. ಅಂದರೆ, ಒಂದು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.