ಭಾರತ, ಮಾರ್ಚ್ 29 -- ಈ ಫೋಟೋದಲ್ಲಿರುವ ಕಲಾವಿದೆ ಅಣ್ಣಯ್ಯ ಧಾರಾವಾಹಿಯ ರಶ್ಮಿ ಪಾತ್ರಧಾರಿ ಪ್ರತೀಕ್ಷಾ ಶ್ರೀನಾಥ್.

ಇವರು ಮೂಲತಃ ಬೆಂಗಳೂರಿನವರು. ಹುಟ್ಟಿ, ಬೆಳೆದು ಶಿಕ್ಷಣ ಪಡೆದುಕೊಂಡಿರುವುದೆಲ್ಲವೂ ಬೆಂಗಳೂರಿನಲ್ಲೇ.

ಅಣ್ಣಯ್ಯ ಧಾರಾವಾಹಿಯಲ್ಲಿನ ಅವರ ಪಾತ್ರಕ್ಕೂ, ನಿಜ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ. ಯಾಕೆಂದರೆ ಅವರು ಪೇಟೆಯಲ್ಲಿ ಹುಟ್ಟಿ ಬೆಳೆದವರು.

ಅಣ್ಣಯ್ಯ ಧಾರಾವಾಹಿಯಲ್ಲಿ ಅಪ್ಪಟ ಹಳ್ಳಿ ಹುಡುಗಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಎಲ್ಲರ ಪ್ರೀತಿಯ ಗುಂಡಮ್ಮನಾಗಿ ಹಾಗೂ ಅಣ್ಣಯ್ಯನ ಪ್ರೀತಿಯ ತಂಗಿ ರಶ್ಮಿಯಾಗಿ ಎಲ್ಲರ ಮನ ಗೆದ್ದಿದ್ದಾರೆ.

ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಸೀನನ ಜತೆ ಮದುವೆಯಾದ ದೃಶ್ಯಗಳು ಪ್ರಸಾರವಾಗುತ್ತಿದ್ದು, ಸೀನ ಹಾಗೂ ರಶ್ಮಿ ಇಬ್ಬರ ಮಾತನ್ನು ವೀಕ್ಷಕರು ಹೆಚ್ಚು ಇಷ್ಟಪಡುತ್ತಿದ್ದಾರೆ.

Published by HT Digital Content Services with permission from HT Kannada....