Bangalore, ಏಪ್ರಿಲ್ 19 -- 'ನೆನಪಿರಲಿ' ಪ್ರೇಮ್,‍ ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರೇಮ್‍ ಹೊಸ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಈ ಚಿತ್ರವನ್ನು ನಟಿ ರಂಜನಿ ರಾಘವನ್‍ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ 'ಡಿ ಡಿ ಢಿಕ್ಕಿ' ಎಂಬ ಹೆಸರು ಇಡಲಾಗಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಗಣೇಶ್‍ ಮಗ ವಿಹಾನ್‍, ಪ್ರೇಮ್‍ ಅವರ ಮಗನಾಗಿ ಕಾಣಿಸಿಕೊಂಡಿದ್ದು, ಚಿತ್ರದ ಮೋಷನ್‍ ಪೋಸ್ಟರ್‍ ಸಹ ಬಿಡುಗಡೆಯಾಗಿದೆ.

ಈ ಚಿತ್ರದ ಕುರಿತು ಮಾತನಾಡುವ ಪ್ರೇಮ್‍, 'ನಾನು ಇದುವರೆಗೂ ಅಭಿನಯಿಸಿರುವ ಚಿತ್ರಗಳ ಪೈಕಿ ಹಲವು ಚಿತ್ರಗಳು ಹೊಸ ನಿರ್ಮಾಪಕರು ಮತ್ತು ನಿರ್ದೇಶಕರದ್ದು. ಇದು ಸಹ ಅಂಥದ್ದೇ ಒಂದು ಚಿತ್ರ. ಈ ಚಿತ್ರ ಮಾಡುವುದಕ್ಕೆ ದೇವರಾಣೆ ನನಗೆ ಮನಸ್ಸಿರಲಿಲ್ಲ. ತರುಣ್‍ ಸುಧೀರ್‍ ಅದೊಂದು ದಿನ ಫೋನ್‍ ಮಾಡಿ, ಈ ಕಥೆ ನಿಮಗೆ ಹೊಂದುತ್ತದೆ, ಇದೊಂದು ಫ್ಯಾಮಿಲಿ ಚಿತ್ರ ಎಂದರು. ಫ್ಯಾಮಿಲಿ ಚಿತ್ರ ಎಂದು ಕೇಳಿದ ತಕ್ಷಣ ನಾನು ಆಗೋಲ್ಲ ಎಂದೆ. ಪ್ರೇಮಕಥೆ ಮತ್ತು ಫ್ಯಾಮಿಲಿ ಚಿತ್ರಗಳನ್ನು ...