ಭಾರತ, ಏಪ್ರಿಲ್ 5 -- ಹುಣಸೂರು: ಇನ್ಸ್‌ಟಾಗ್ರಾಮ್‌ನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ನಡವಳಿಕೆಯಿಂದ ಬೇಸತ್ತ ಯುವಕ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೂಚಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ತುಮಕೂರು ಮೂಲದ ಪವಿತ್ರ (26) ಕೊಲೆಯಾದಾಕೆ. ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೂಚಹಳ್ಳಿಯ ನಾಗೇಶ್ ರವರ ಪುತ್ರ ಎಳನೀರು ವ್ಯಾಪಾರಿ ಸಚ್ಚಿನ್ (26) ಶರಣಾಗಿರುವ ಆರೋಪಿ. ಈತನೊಂದಿಗೆ ಬಾಲಾಪರಾಧಿಯೊಬ್ಬನಿದ್ದಾನೆ.

ಕಳೆದ ಆರು ತಿಂಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಪವಿತ್ರ ತನಗೆ ಯಾರೂ ಇಲ್ಲ, ತಾನು ಇನ್‌ಫೋಸೀಸ್ ಉದ್ಯೋಗಿ ಎಂದು ನಂಬಿಸಿ, ಆರೋಪಿ ಸಚ್ಚಿನ್ ಮನೆಯವರ ಸಮ್ಮುಖದಲ್ಲೇ ಸರಳವಾಗಿ ವಿವಾಹವಾಗಿದ್ದರು.

ಸಚ್ಚಿನ್ ನಿತ್ಯ ಮೈಸೂರಿನ ಇನ್‌ಫೊಸೀಸ್‌ಗೆ ಪವಿತ್ರಳನ್ನು ಕರೆದೊಯ್ಯುತ್ತಿದ್ದ, ಆರು ತಿಂಗಳಲ್ಲೇ ಪತಿಯಿಂದ 10ಕ್ಕೂ ಹೆಚ್ಚು ಚೆಕ್ ಪಡೆದು ಬೇರೆಯವರಿಂದ ಹಣ...