ಭಾರತ, ಮೇ 6 -- ರೆಸ್ಟೋರೆಂಟ್​ನಲ್ಲಿ ಬಗೆಬಗೆ ತಿನಿಸುಗಳಂತೆಯೇ ಒಟಿಟಿಯಲ್ಲಿ ತರಹೇವಾರಿ ಚಿತ್ರಗಳು ಡಿಜಿಟಲ್ ರೂಪದಲ್ಲಿ ಸ್ಟ್ರೀಮ್ ಆಗುತ್ತಿವೆ. ಕೆಲವು ಪ್ರಯೋಗಾತ್ಮಕ ಚಿತ್ರಗಳು ಒಟಿಟಿ ರೂಪದಲ್ಲೂ ಮನರಂಜನೆ ನೀಡುತ್ತಿವೆ. ಇಂತಹ ಪ್ರಯೋಗಾತ್ಮಕ ಸಿನಿಮಾಗಳು ಮಲಯಾಳಂ ಮತ್ತು ಹಾಲಿವುಡ್​​ನಲ್ಲಿ ಬರುವುದೇ ಹೆಚ್ಚು. ಹಾಗಿದ್ದರೆ ನಿಮ್ಮದು ತಪ್ಪು ಕಲ್ಪನೆ. ಏಕೆಂದರೆ ತೆಲುವು ಚಿತ್ರರಂಗವೂ ಇದಕ್ಕೇನು ಕಡಿಮೆ ಇಲ್ಲ.

ಅದಕ್ಕೆ ಉದಾಹರಣೆ 'ಮನು' ಸಿನಿಮಾ. 2018ರಲ್ಲಿ ಬಿಡುಗಡೆಯಾದ ಸಿನಿಮಾ 'ಮನು' ತೆಲುಗು ಭಾಷೆಯ ಪ್ರಾಯೋಗಿಕ ಪ್ರಣಯ ಕಲಾತ್ಮಕ ಚಿತ್ರವಾಗಿದೆ. ಈ ಚಿತ್ರದ ಮೂಲಕ ಫಣೀಂದ್ರ ನರ್ಸೆಟ್ಟಿ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದರು. ಬ್ರಹ್ಮಾನಂದಂ ಅವರ ಪುತ್ರ ರಾಜ ಗೌತಮ್ ಮತ್ತು ಕಲರ್ ಫೋಟೋ ನಾಯಕಿ ಚಾಂದಿನಿ ಚೌಧರಿ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಅಭಿರಾಮ್ ವರ್ಮ, ಕೇರ್ ಆಫ್ ಕಂಚೇರಪಾಲೆಂ ಖ್ಯಾತಿಯ ಮೋಹನ್ ಭಗತ್, ಜಾನ್ ಕೊಟ್ಟೋಳಿ, ಅಪ್ಪಾಜಿ ಅಂಬರೀಶ ದರ್ಬಾ, ಶ್ರೀಕಾಂತ್ ಸೇರಿದಂತೆ ಪ್ರಮುಖರು ...