ಭಾರತ, ಮೇ 3 -- ಪ್ರತಿಷ್ಠೆಯ ಕದನಕ್ಕೆ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸಿದ್ಧಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಕಾದಾಟಕ್ಕೆ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಮೊದಲ ಮುಖಾಮುಖಿಯಲ್ಲಿ ಚೆನ್ನೈ ತಂಡವನ್ನು ಅವರ ತವರು ನೆಲದಲ್ಲೇ ಮಣಿಸಿರುವ ಆರ್ಸಿಬಿ ಈಗ ತಮ್ಮ ಅಭಿಮಾನಿಗಳ ಮುಂದೆ ಬಗ್ಗುಬಡಿಯಲು ಭರ್ಜರಿ ಕಸರತ್ತು ನಡೆಸಿದೆ. ಆದರೆ ಅದಕ್ಕೂ ಮುನ್ನ ಉಭಯ ತಂಡಗಳ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಹೊರ ಬಿದ್ದಿದೆ. ಪಂದ್ಯಕ್ಕೆ ಮಳೆಯ ಭೀತಿ ಹೆಚ್ಚಿಸಿದೆ. ಕಳೆದ 2 ದಿನಗಳಿಂದ ರಾತ್ರಿ ವೇಳೆಯೇ ಮಳೆ ಸುರಿಯುತ್ತಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ಇವತ್ತು ಸಹ (ಮೇ 3) ರಾತ್ರಿ ಮಳೆ ಬೀಳುವ ಸಾಧ್ಯತೆ ಇದೆ. ಆರ್ಸಿಬಿ vs ಸಿಎಸ್ಕೆ ಪಂದ್ಯದ ಹವಾಮಾನ ಮುನ್ಸೂಚನೆ ಉತ್ತಮವಾಗಿಲ್ಲ. ಅಕ್ಯೂವೆದರ್ ಪ್ರಕಾರ, ಶನಿವಾರ ಸಂಜೆ ಮಳೆಯಾಗುವ ಸಾಧ್ಯತೆ ಶೇ 50 ಕ್ಕಿಂತ ಹೆಚ್ಚಿದೆ. ಪಂದ್ಯದ ವೇಳೆ ಮಳೆಯಿಂದ ಅಡಚಣೆಗಳು ಉಂಟಾಗಬಹುದು. ನಿರಂತರ ಮಳೆ ಸುರಿದರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.