Bengaluru, ಮೇ 7 -- ಭಾರತೀಯ ಸೇನೆ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಭಾಗವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಇದ್ದ ಭಯೋತ್ಪಾದಕರ ತಾಣಗಳ ಮೇಲೆ ರಾತ್ರೋರಾತ್ರಿ ದಾಳಿ ಮಾಡಿದೆ. ಈ ಕಾರ್ಯಾಚರಣೆಯಲ್ಲಿ, ಜೈಶ್-ಎ-ಮೊಹಮ್ಮದ್ (ಜೆಎಂ) ಮತ್ತು ಲಷ್ಕರ್-ಎ-ತೈಬಾ (ಎಲ್ಇಟಿ) ನ ಪ್ರಮುಖ ನೆಲೆಗಳು ನಾಶವಾಗಿದೆ. ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಡಿಜಿ ಐಎಸ್ ಪಿಆರ್ ಕೂಡ ಈ ದಾಳಿಗಳನ್ನು ದೃಢಪಡಿಸಿದೆ. ಕೋಟ್ಲಿ, ಮುರಿಡ್ಕೆ ಹಾಗೂ ಬಹವಾಲ್ಪುರದ ಐದು ಸ್ಥಳಗಳಲ್ಲಿ ದಾಳಿ ನಡೆದಿದೆ ಎಂದು ಹೇಳಿದೆ.
ಲಾಹೋರ್ ನಿಂದ 33 ಕಿ.ಮೀ ದೂರದಲ್ಲಿರುವ ಐತಿಹಾಸಿಕ ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿರುವ 'ಮರ್ಕಜ್-ಎ-ತೈಬಾ' ಎಂದು ಕರೆಯಲ್ಪಡುವ ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿ ಮುರಿಡ್ಕೆ. ಜಮಾತ್-ಉದ್-ದವಾ ಎಂಬ ದತ್ತಿ ಸಂಘಟನೆಯ ಹೆಸರಿನಲ್ಲಿ ಪ್ರಧಾನ ಕಚೇರಿ ಕಾರ್ಯನಿರ್ವಹಿಸುತ್ತಿದೆ, ಆದರೆ ವಾಸ್ತವವಾಗಿ ಇದು ಲಷ್ಕರ್ ನ ಸೈದ್ಧಾಂತಿಕ, ತರಬೇತಿ ಹಾಗೂ ಕಾರ್ಯಾಚರಣೆ ಕೇಂದ್ರವಾಗಿದೆ.
ಇಂಡಿಯಾ ಟುಡೇ ವರದಿಯ ಪ್ರಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.