Bengaluru, ಮೇ 12 -- ಮೈಸೂರು: ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರ ವಿರುದ್ಧ ಭಾರತದ ಯೋಧರು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಪ್ರತ್ಯುತ್ತರ ನೀಡಿದ್ದಕ್ಕಾಗಿ ಹಾಗೂ ನಮ್ಮ ಹೆಮ್ಮೆಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಮೈಸೂರಿನಲ್ಲಿ ಟೀಂ ಮೈಸೂರು ತಂಡದ ವತಿಯಿಂದ ದೇಶಕ್ಕಾಗಿ ರ್ಯಾಲಿ ಎಂಬ ಶೀರ್ಷಿಕೆ ಅಡಿಯಲ್ಲಿ ಬೈಕ್ ರ್ಯಾಲಿ ಮಾಡಲಾಯಿತು.
ರ್ಯಾಲಿಯಲ್ಲಿ ಮೊದಲಿಗೆ ಮಡಿದ ವೀರ ಯೋಧರಿಗೆ ಹಾಗೂ ಅಕಾಲಿಕ ಮರಣಕ್ಕೆ ತುತ್ತಾದ ಮೈಸೂರಿನ ಪದ್ಮಶ್ರೀ ಪುರಸ್ಕೃತ ಡಾ. ಸುಬ್ಭಣ್ಣ ಅಯ್ಯಪ್ಪನ್ ಅವರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆಯನ್ನು ಮಾಡಲಾಯಿತು. ನಂತರ ಬೈಕ್ ರ್ಯಾಲಿಯನ್ನು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಾರಂಭಿಸಿ ಗಾಂಧಿ ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಚಿಕ್ಕಗಡಿಯಾರದ ಮುಖಾಂತರ ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ ಮೂಲಕ ಶಾಂತಲಾ ಚಿತ್ರಮಂದಿರದ ಬಳಿ ಕೊನೆಗೂಳಿಸಲಾಯಿತು.
ಟೀಂ ಮೈಸೂರು ತಂಡದ ಸದಸ್ಯರ ಜೊತೆಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘವು ಕೂಡ ಬೆಂಬಲಿಸಿ ಬೈಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.