Bangalore, ಮೇ 8 -- ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವಿಗೀಡಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. 'ಆಪರೇಷನ್ ಸಿಂದೂರ್' ಅಡಿಯಲ್ಲಿ ಉಗ್ರ ನೆಲೆಗಳ ಮೇಲೆ ಸೇನೆ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ಬುಧವಾರ ಬೆಳಗಿನ ಜಾವ 1.44 ಕ್ಕೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿದ್ದು, ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿಲ್ಲ ಎಂದು ಹೇಳುವ ಮೂಲಕ ಸೇನೆ, ಗುರಿಗಳ ಆಯ್ಕೆ ಮತ್ತು ಪ್ರತೀಕಾರದ ವಿಧಾನದಲ್ಲಿ ಪಾಲಿಸಿರುವ ಸಂಯಮವನ್ನು ಒತ್ತಿ ಹೇಳಿದೆ. ವರದಿಗಳ ಪ್ರಕಾರ, ಈ ದಾಳಿಗಳಿಗೆ ಸ್ಕ್ಯಾಲ್ಪ್( SCALP) ಕ್ರೂಸ್ ಕ್ಷಿಪಣಿಗಳು ಮತ್ತು ರಫೇಲ್ ವಿಮಾನಗಳಲ್ಲಿ ಅಳವಡಿಸಲಾದ ಪ್ರಿಸಿಸೆಷನ್ ಗೈಡೆಡ್ ಹ್ಯಾಮರ್ ಬಾಂಬ್ಗಳನ್ನು ಬಳಸಲಾಗಿದೆ.
" ಸ್ಟಾರ್ಮ್ ಶಾಡೋ" ಎಂದೂ ಕರೆಯಲ್ಪಡುವ ಸ್ಕ್ಯಾಲ್ಪ್ ದೀರ್ಘ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.