ಭಾರತ, ಮಾರ್ಚ್ 21 -- ಬೆಂಗಳೂರು: ತೆಲುಗು ನಟರು, ನಟಿಯರು ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳನ್ನು ಪ್ರಚಾರ ಮಾಡುವ ವಿಷಯಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಿನ್ನೆ ದೂರು ದಾಖಲಿಸಿಕೊಂಡಿದ್ದರು. ಸುಮಾರು 25 ಜನರ ವಿರುದ್ಧ ದೂರು ದಾಖಲಾಗಿತ್ತು. ಕರ್ನಾಟಕ ಮೂಲದ ಬಹುಭಾಷಾ ನಟ ಪ್ರಕಾಶ್‌ ರೈ ಕೂಡ ಈ ಲಿಸ್ಟ್‌ನಲ್ಲಿದ್ದರು. ಜಂಗ್ಲೀ ರಮ್ಮಿ ಪ್ರಚಾರ ಮಾಡಿರುವ ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಅವರನ್ನು ಆರೋಪಿ 1 ಮತ್ತು ಆರೋಪಿ 2 ಎಂದು ಆರೋಪಿಸಲಾಗಿದೆ. ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್ ಮತ್ತು ಅನನ್ಯಾ ನಾಗೆಲ್ಲಾ ಸೇರಿದಂತೆ ಹಲವು ನಟಿಯರು, ನಟರು ಈ ಲಿಸ್ಟ್‌ನಲ್ಲಿದ್ದರು. ಸೋಷಿಯಲ್‌ ಮೀಡಿಯಾದ ಹಲವು ಇನ್‌ಫ್ಲೂಯೆನ್ಸರ್‌ಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪ್ರಕಾಶ್‌ ರೈ ಮತ್ತು ರಾಣಾ ದಗ್ಗುಬಾಟಿ ಈ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. ವಿಜಯ ದೇವರಕೊಂಡ ಟೀಮ್‌ ಕೂಡ ಈ ಕುರಿತು ಸ್ಪಷ್ಟನೆ ನೀಡಿದೆ. ನಾವೀಗ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳ ಪ್ರಚಾರ ಮಾಡುತ್ತಿಲ್ಲ. ಅದೆಲ್ಲ ಹಳೆ ಕಥೆ ಎಂದು ಇವ...