ಭಾರತ, ಮೇ 1 -- ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ 18ನೇ ಆವೃತ್ತಿಯಲ್ಲಿ ಸಂಪೂರ್ಣ ನಿರಾಸೆ ಮೂಡಿಸಿದೆ. ಲೀಗ್ ಹಂತದಲ್ಲಿ ತನಗೆ ಇನ್ನೂ 4 ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ತನ್ನ ತವರಿನ ಚೆಪಾಕ್ ಕೋಟೆಯನ್ನೇ ಬೇಧಿಸಲು ವಿಫಲವಾದ ಮಹೇಂದ್ರ ಸಿಂಗ್ ಧೋನಿ ಪಡೆ, ಆಡಿದ 10 ಪಂದ್ಯಗಳಲ್ಲಿ 8 ಸೋಲು ಕಂಡಿದೆ. ಏಪ್ರಿಲ್ 30ರಂದು ರಾತ್ರಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 4 ವಿಕೆಟ್ಗಳ ಸೋಲು ಅನುಭವಿಸಿದ ಬೆನ್ನಲ್ಲೇ ಚೆನ್ನೈ ಅಭಿಯಾನ ಮುಗಿಸಿತು. ಆದರೆ ಪಂದ್ಯ ಸೋತಿದ್ದಕ್ಕಿಂತ ಅಪರೂಪದ ಘಟನೆಯೊಂದು ಎಲ್ಲರ ಮನ ಗೆದ್ದಿತು.
ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ 19.2 ಓವರ್ಗಳಲ್ಲಿ 190 ರನ್ ಗಳಿಸಿ ಆಲೌಟ್ ಆಯಿತು. ಎಡಗೈ ಬ್ಯಾಟರ್ ಸ್ಯಾಮ್ ಕರನ್ 88 ರನ್ ಗಳಿಸಿ ತಂಡದ ಮೊತ್ತ ಏರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.