ಭಾರತ, ಮೇ 1 -- ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ 18ನೇ ಆವೃತ್ತಿಯಲ್ಲಿ ಸಂಪೂರ್ಣ ನಿರಾಸೆ ಮೂಡಿಸಿದೆ. ಲೀಗ್ ಹಂತದಲ್ಲಿ ತನಗೆ ಇನ್ನೂ 4 ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇಆಫ್​ ರೇಸ್​​ನಿಂದ ಅಧಿಕೃತವಾಗಿ ಹೊರಬಿದ್ದಿದೆ. ತನ್ನ ತವರಿನ ಚೆಪಾಕ್ ಕೋಟೆಯನ್ನೇ ಬೇಧಿಸಲು ವಿಫಲವಾದ ಮಹೇಂದ್ರ ಸಿಂಗ್ ಧೋನಿ ಪಡೆ, ಆಡಿದ 10 ಪಂದ್ಯಗಳಲ್ಲಿ 8 ಸೋಲು ಕಂಡಿದೆ. ಏಪ್ರಿಲ್ 30ರಂದು ರಾತ್ರಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 4 ವಿಕೆಟ್​​ಗಳ ಸೋಲು ಅನುಭವಿಸಿದ ಬೆನ್ನಲ್ಲೇ ಚೆನ್ನೈ ಅಭಿಯಾನ ಮುಗಿಸಿತು. ಆದರೆ ಪಂದ್ಯ ಸೋತಿದ್ದಕ್ಕಿಂತ ಅಪರೂಪದ ಘಟನೆಯೊಂದು ಎಲ್ಲರ ಮನ ಗೆದ್ದಿತು.

ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್​​ 19.2 ಓವರ್​​​​ಗಳಲ್ಲಿ 190 ರನ್ ಗಳಿಸಿ ಆಲೌಟ್ ಆಯಿತು. ಎಡಗೈ ಬ್ಯಾಟರ್​ ಸ್ಯಾಮ್ ಕರನ್ 88 ರನ್ ಗಳಿಸಿ ತಂಡದ ಮೊತ್ತ ಏರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗ...