Bangalore, ಏಪ್ರಿಲ್ 25 -- ಅಯ್ಯನ ಮನೆ ವೆಬ್ ಸೀರಿಸ್ ವಿಮರ್ಶೆ: ಅಯ್ಯನ ಮನೆ ವೆಬ್ ಸರಣಿ ಏಪ್ರಿಲ್ 25ರಂದು ಬಿಡುಗಡೆಯಾಗಿದೆ. ಜೀ5 ಒಟಿಟಿಯಲ್ಲಿ ರಿಲೀಸ್ ಆಗಿರುವ ಈ ವೆಬ್ ಸರಣಿ ಕುರಿತು ಒಟಿಟಿ ವೀಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟುವಲ್ಲಿ ಈ ವೆಬ್ ಸರಣಿ ಯಶಸ್ವಿಯಾಗಿರುವುದೇ? ತಿಳಿಯೋಣ ಬನ್ನಿ. ಇದು ಮಿನಿ ವೆಬ್ ಸರಣಿ. ಒಂದು ಸಿನಿಮಾ ನೋಡುವುದಕ್ಕಿಂತಲೂ ಬೇಗ ಈ ಮಿನಿ ವೆಬ್ಸರಣಿಯನ್ನು ನೋಡಿ ಮುಗಿಸಬಹುದು. 111.19 ನಿಮಿಷದ ಈ ವೆಬ್ ಸರಣಿಯು ಒಂದು ಮನೆಯೊಳಗೆ ನಡೆಯುವ ನಿಗೂಢ ಕೊಲೆಗಳ ಜಾಡು ಹಿಡಿಯುವ ಕಥಾನಕ ಹೊಂದಿದೆ.
ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ಆರು ಭಾಗಗಳಾಗಿ ಕತ್ತರಿಸಿದಂತೆ ಈ ಮಿನಿ ವೆಬ್ಸರಣಿ ನೋಡಿಸಿಕೊಂಡು ಹೋಗುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ಗಳಿಗೆ ಇರಬೇಕಾದ ಹಿನ್ನೆಲೆ ಧ್ವನಿ, ಬಿಜಿಎಂ ಇದೆ. ಹಿನ್ನೆಲೆ ಸಂಗೀತ ಈ ವೆಬ್ ಸರಣಿಯ ಗಮನ ಸೆಳೆಯುವ ಪ್ರಮುಖಾಂಶ ಎಂದರೂ ತಪ್ಪಾಗದು. ದೃಶ್ಯಗಳು ಮಂದ ಬೆಳಕಿನಲ್ಲಿಯೇ ಹೆಚ್ಚು ಕಾಣಿಸುತ್ತವೆ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.